Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಆಯೋಜನೆ

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಗಡಿ ಭಾಗವಾದ ಚಾಮರಾಜನಗರದಲ್ಲಿ ಸೆಪ್ಟೆಂಬರ್ 6ರ ಭಾನುವಾರ ಸಂಜೆ 2.30ಕ್ಕೆ 16ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ರಥದ ಬೀದಿಯಲ್ಲಿ ಜರಗಲಿದೆ.

 ಮೊಸರು ಮಡಿಕೆ ಒಡೆಯುವ ಉತ್ಸವ ಪೂರ್ವ ಮಡಿಕೆ ತಯಾರಿಕೆ ನಡೆಸಲು ಹೆಗ್ಗೋ ಟ್ಟಾರ ಗ್ರಾಮದ ಮಡಿಕೆ ನಂಜಪ್ಪನವರ ಗುಡಿ ಕೈಗಾರಿಕೆಯಲ್ಲಿ ಮಡಿಕೆ ತಯಾರಿಸುವ ಸಲುವಾಗಿ ವಿಶೇಷ ಮೃತ್ತಿಕಾ ಪೂಜೆ(ಮಣ್ಣಿನ ಪೂಜೆ ) ಹಾಗೂ ಗೋ ಪೂಜೆ ಯನ್ನು ನೆರವೇರಿಸಲಾಯಿತು.

Advertisement

 ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕಳೆದ 16 ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮೊಸರು ಮಡಿಕೆ ಒಡೆಯುವ ಉತ್ಸವವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಮೊಸರು ಮಡಿಕೆ ತಯಾರಿಕೆಯ  ಹಿನ್ನೆಲೆಯಲ್ಲಿ ಹೆಗ್ಗೋಟಾರ ಗ್ರಾಮದಲ್ಲಿ ವಿಶೇಷವಾದ ಮಣ್ಣನ್ನು ಪೂಜಿಸಿ ಅದರಲ್ಲಿ ಮಡಿಕೆ ತಯಾರಿಸಿ ಭಕ್ತಿ ಪೂರ್ವಕವಾಗಿ ದೈವಿ ಸ್ವರೂಪವಾದ ಭೂತಾಯಿಯ ಆಶೀರ್ವಾದದೊಂದಿಗೆ ಪ್ರತಿವರ್ಷ ಮಡಿಕೆಯನ್ನು ತಯಾರು ಮಾಡಲಾಗುವುದು. ಭಾರತೀಯ ಸಂಸ್ಕೃತಿಯಲ್ಲಿ ಮಣ್ಣು ಪವಿತ್ರವಾದದ್ದು. ತಾಯಿ ಸ್ವರೂಪ ಭೂಮಿಯನ್ನು ಭೂದೇವಿಯ ಸ್ವರೂಪದಲ್ಲಿ ಸರ್ವರಿಗೂ ಫಲವತ್ತತೆ, ಶಕ್ತಿ ಶಾಂತಿ, ನೆಮ್ಮದಿ, ಸಮೃದ್ಧಿ ಆರೋಗ್ಯ, ಏಕತೆ ಉಂಟುಮಾಡುವ ಗುಣ ಇರುವುದು ಮಣ್ಣಿನಲ್ಲಿ. ದೈವೀಕತೆಯ ಜೊತೆಗೆ ಔಷಧೀಯ ರಹಸ್ಯವನ್ನು ಹೊಂದಿರುವ ಮಣ್ಣು ಪವಿತ್ರವಾದದ್ದು. ತಾಯಿ ಭೂದೇವಿಯನ್ನು ಸ್ಮರಿಸಿ ಭೂತಾಯಿಯನ್ನು ಗೌರವಿಸುವ ಸಂಪ್ರದಾಯ ನಮ್ಮದಾಗಿದೆ ಎಂದು ತಿಳಿಸಿ, ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಶ್ರೀ ಕೃಷ್ಣ ಕಬಡ್ಡಿ ಪಂದ್ಯಾವಳಿ ಹಾಗೂ ಕೆಸರುಗದ್ದೆ ಓಟ ನಡೆಸಲಾಗುವುದು.

 ಸೆಪ್ಟಂಬರ್ 6 ಭಾನುವಾರ ಮಧ್ಯಾನ 1.30 ಕ್ಕೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಸಮೀಪದ ರಥದ ಬೀದಿಯಲ್ಲಿ ಭವ್ಯವೇದಿಕೆಯಲ್ಲಿ ರಂಗೋಲಿ ಸ್ಪರ್ಧೆ ಹಾಗೂ ಹೂ ಕಟ್ಟುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

 ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎರಡು ಮೂವತ್ತಕ್ಕೆ ಶ್ರೀ ಕೃಷ್ಣನ ಮೂರ್ತಿಯ ಮೆರವಣಿಗೆ ಚಾಮರಾಜೇಶ್ವರ ದೇವಸ್ಥಾನದ ಪ್ರದಕ್ಷಿಣಾ ಪಥ ವಾಗಿ ಅಗ್ರಹಾರ, ಶ್ರೀ ಭುವನೇಶ್ವರಿ ವೃತ್ತ, ಮಾರ್ಗವಾಗಿ ವೇದಿಕೆ ತಲಪಲಿದೆ. 

  ಶ್ರೀ ಕೃಷ್ಣನ ಭವ್ಯ ಮೆರವಣಿಗೆ ಭಜನೆ,ನಾದ ಸ್ವರ,ಯುವಕರ ತಂಡ,ಬೆಣ್ಣೆ ಹಾಗೂ ಮೊಸರುಗಡಿಕೆಗಳ ಮೆರವಣಿಗೆ ನಡೆಯಲಿದೆ.

 ಪ್ರಸಿದ್ಧ ಗಾಯಕರಾದ ಜ ಸುರೇಶ್ನಾಗ್ ಹರದನಹಳ್ಳಿ ಮತ್ತು ತಂಡದವರಿಂದ ಭಕ್ತಿಗೀತೆಗಳ ಗಾಯನವನ್ನು ಹಮ್ಮಿಕೊಳ್ಳಲಾಗಿದೆ.

 ನಾಟ್ಯಕಲಾ ಸರಸ್ವತಿ ತಂಡ, ಅವತಾರ ಗ್ರೂಪ್ ಡ್ಯಾನ್ಸ್ ರವರಿಂದ ಹಾಗೂ ವಿವಿಧ ತಂಡಗಳಿಂದ ಶ್ರೀಕೃಷ್ಣನ ನೃತ್ಯ ಕಾರ್ಯಕ್ರಮ ಜರುಗಲಿದೆ.

ವೇ.ಬ್ರ.ಶ್ರೀ ಪ್ರದೀಪ್ ಕುಮಾರ್ ದೀಕ್ಷಿತ್ ರವರು ಮೃತಿಕ ಪೂಜೆಯನ್ನು ನೆರವೇರಿಸಿ ಮಾತನಾಡಿ ಮಣ್ಣು ಆನಂದದ ಸಂಕೇತ. ಮಣ್ಣಿನಲ್ಲಿ ಹಲವಾರು ಬಗೆಯ ಶಕ್ತಿಯನ್ನು ಕಾಣಬಹುದು. ಕೃಷ್ಣನ ಉತ್ಸವದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಿ   ಎಂದರು.

 ಕಾರ್ಯಕ್ರಮದಲ್ಲಿ ಗ್ರಾಮದ ಮಡಿಕೆ ನಂಜಪ್ಪ, ಶಿವ ಶೆಟ್ಟಿ, ಶ್ರೀ ಕೃಷ್ಣ ಪ್ರತಿಷ್ಠಾನದ ಬಿಕೆ ಆರಾಧ್ಯ ಇದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಡಾ ಪ್ರಕರಣ: ಲೋಕಾಯುಕ್ತ ‘ಬಿ’ ರಿಪೋರ್ಟ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಇಡಿ‘ಬಳ್ಳಾರಿ ಚಲೋ’ ಬರೀ ಗಿಮಿಕ್, ಬಿಎಸ್ ವೈ ಭ್ರಷ್ಟಾಚಾರದ ಪಿತಾಮಹ: ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ಮೇಕೆದಾಟು ಯೋಜನೆ: CWC ಅಧ್ಯಕ್ಷರ ಭೇಟಿಯಾದ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಮಹಿಳೆಯರ ತ್ಯಾಗ, ಶಕ್ತಿ ಅಪಾರ: ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ಪಾತ್ರವೇ ಶ್ರೇಷ್ಠ –ಸಿಎಂ ಡಿ.ಕೆ. ಶಿವಕುಮಾರ್ಸಾಮಾನ್ಯ ಪ್ರಯಾಣಿಕರಂತೆ 'ನಮ್ಮ ಮೆಟ್ರೋ' ಏರಿದ ಸಚಿವ ಕೃಷ್ಣ ಬೈರೇಗೌಡ:‘ನಮ್ಮ ಮೆಟ್ರೋ’ ಪಿಂಕ್ ಲೈನ್ ಉದ್ಘಾಟನೆಗೆ ಸಿದ್ಧ: ಸೆಪ್ಟೆಂಬರ್‌ನಲ್ಲೇ ಕಾಳೇನ ಅಗ್ರಹಾರ-ತಾವರೆಕೆರೆ ಮಾರ್ಗ ಮುಕ್ತಾಯ?KPSC ಅಕ್ರಮಗಳಿಗೆ ಎನ್‌ಡಿಎ ಪಿತಾಮಹ, ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿನಾಗೇಂದ್ರ, ತುಕಾರಾಂ, ಭರತ್‌ರೆಡ್ಡಿಗೆ ಜನಾರ್ದನ ರೆಡ್ಡಿ ಬಣದ ನಾಯಕರ ತೀವ್ರ ಸವಾಲು!KRIDLನಲ್ಲಿ ಶೇ.7ರಷ್ಟು ಲಂಚ: ಇಬ್ಬರು ಸಚಿವರನ್ನು ವಜಾಗೊಳಿಸಿ, ಸಿಬಿಐ ತನಿಖೆಗೆ ಆರ್‌ಅಶೋಕ ಆಗ್ರಹನೂರು ಕೇಸ್ ಹಾಕಿದರೂ ರಾಹುಲ್ ಗಾಂಧಿ ಹೆದರಲ್ಲ: ಸಿಎಂ ಶಿವಕುಮಾರ್, ಸಿದ್ದರಾಮಯ್ಯ ಆಕ್ರೋಶ