ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಾನಪದ ಸಂತೃಪ್ತಿ ಬದುಕನ್ನು ಹುಡುಕುತ್ತದೆ. ಜನಪದರು ವಾಸ್ತವ ಜೊತೆ ಒಡನಾಟವಿತ್ತು. ಹಾಡು ಕುಣಿತವಿತ್ತು, ಪ್ರಕೃತಿ ಧರ್ಮವನ್ನು ಅಳವಡಿಸಿಕೊಂಡವರು ಈ ನೆಲದ ಅಸ್ಮಿತೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಅಭಿಪ್ರಾಯಪಟ್ಟರು.
ಅವರು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗವು ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ್ದ ಮಾತು ಮಂಥನ-ಕಲಾಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾನಪದ ಸಮುದಾಯಗಳು ಜಾಗತೀಕ ಸಮುದಾಯಗಳಾಗಬೇಕು. ಜಾನಪದ ಕಲೆಗಳ ದಿಬ್ಬಣ ವಾಗಿತ್ತು. ಹಸಿರು ತೋರಣಗಳಿಂದ ಸಿಂಗರಿಸಿತ್ತು. ಮಣ್ಣಿನ ವಾಸನೆಯ ಅರಿವು ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಶರತ್ ಅನಂತ್ ಮೂರ್ತಿ ಅವರು ಜಾನಪದದ ಗಂಭೀರ ಅಧ್ಯಯನ ನಡೆಯಬೇಕು.ಕನ್ನಡವು ಅಂತರ್ ಶಿಸ್ತು ಅಧ್ಯಯನಕ್ಕೆ ಒಳಪಡಿಸಬೇಕು. ಹಳೆಯದು ಹೊಸದು ಸಂಕೀರ್ಣ ಸಂಯೋಜನೆಯಾಗಿದೆ. ಸಂಸ್ಕೃತಿಯ ಉಳಿಸಲು ಹೋರಾಡಬೇಕು ಎಂದು ಕರೆ ನೀಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಭಾರತಿ ನಿರ್ದೇಶಕರಾದ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಸ್ವಾಗತಿಸಿದರು. ಸುಮಿತ್ರಾ ಪಿ.ಟಿ. ಮತ್ತು ಭೂಮಿಕಾ ಎಲ್.ಟಿ. ಅವರುಗಳನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಕೆಂಕೆರೆ ಉಪಸ್ಥಿತರಿದ್ದರು. ಮಹಿಳಾ ಡೊಳ್ಳು ಕುಣಿತ. ಮಹಿಳಾ ವೀರಗಾಸೆ ಪ್ರದರ್ಶನ ಜರುಗಿತು. ಬಸವರಾಜ್ ಮತ್ತು ತಂಡವು ಜಾನಪದ ಗಾಯನ ನಡೆಸಿಕೊಟ್ಟರು.




