LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ 'ಸಾಹುಕಾರ್ ಜಾನಕಿ' ನಿಧನ:

Advertisement
Advertisement

ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ 'ಸಾಹುಕಾರ್ ಜಾನಕಿ' ನಿಧನ: ಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
 ಭಾರತೀಯ ಚಿತ್ರರಂಗದ ದೈತ್ಯ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಹುಕಾರ್ ಜಾನಕಿಖ್ಯಾತಿಯ ಶಂಕರಮಂಚಿ ಜಾನಕಿ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಕಂಬನಿ ಮಿಡಿದಿದ್ದಾರೆ.

​ಅವರ ನಿಧನದಿಂದಾಗಿ ಚಿತ್ರರಂಗದ ಮಹಾನ್ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ ಎಂದು ಬಣ್ಣಿಸಿರುವ ಡಿ.ಕೆ. ಶಿವಕುಮಾರ್, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಮತ್ತು ಕಲಾಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

​​ಅಮೋಘ ಕಲಾ ಸೇವೆ: ಕನ್ನಡ, ತಮಿಳು ಹಾಗೂ ತೆಲುಗು ಸೇರಿದಂತೆ ವಿವಿಧ ಭಾಷೆಗಳ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 300ಕ್ಕೂ ಅಧಿಕ ನಾಟಕಗಳಲ್ಲಿ ಅದ್ಭುತವಾಗಿ ನಟಿಸಿ ಕಲಾಭಿಮಾನಿಗಳ ಹೃದಯದಲ್ಲಿ ಸಾಹುಕಾರ್ ಜಾನಕಿಶಾಶ್ವತ ಸ್ಥಾನ ಪಡೆದಿದ್ದಾರೆ.

​ಸದಾ ಸ್ಮರಣೀಯ: ಅವರು ಕಲಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ರಂಗಭೂಮಿ ಸೇವೆ ಎಂದೆಂದಿಗೂ ಸ್ಮರಣೀಯವಾಗಿರಲಿದೆ.

​ಚಿತ್ರರಂಗಕ್ಕೆ ನಷ್ಟ: ಭಾರತೀಯ ಚಿತ್ರರಂಗದ ಹಿರಿಯ ಕೊಂಡಿಯಂತಿದ್ದ ಅವರ ಅಗಲಿಕೆ ಚಲನಚಿತ್ರ ಕ್ಷೇತ್ರಕ್ಕೆ ಹಾಗೂ ಅಭಿಮಾನಿಗಳಿಗೆ ಭರಿಸಲಾರದ ನಷ್ಟವಾಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆ. 25ರಂದು ನೇರ ನೇಮಕಾತಿ ಸಂದರ್ಶನಆ.23ರಂದು ‘ನಾನು, ನೀನು ಮತ್ತು ಸ್ಕಿಜೋಫ್ರೇನಿಯಾ' ಕವನ ಸಂಕಲನ ಲೋಕಾರ್ಪಣೆಆದಿಜಾಂಬವ ಮಠದಲ್ಲಿ ಏಕಪಕ್ಷೀಯ ಸಮಾರಂಭ: ಸಮುದಾಯದ ಮುಖಂಡರಿಂದ ಕಾರ್ಯಕ್ರಮ ಬಹಿಷ್ಕಾರಕಾಯಕದಿಂದ ಮಾತ್ರ ಲಕ್ಷ್ಮಿ ಪ್ರಾಪ್ತಿ; ಶ್ರೀ ಮಾದರ ಚನ್ನಯ್ಯ ಸ್ವಾಮೀಜಿಕರ್ನಾಟಕದ ಬುಡಕಟ್ಟು ಸಮುದಾಯಗಳ ಹಕ್ಕು ಮತ್ತು ಅಭಿವೃದ್ಧಿಗೆ ಸಂಸದ ಗೋವಿಂದ ಕಾರಜೋಳ ಧ್ವನಿಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ 'ಸಾಹುಕಾರ್ ಜಾನಕಿ' ನಿಧನ:ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಶಾಸಕರಿಂದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಕ್ವಿನ್ ಸಿಟಿಯಲ್ಲಿ ವಿದೇಶಿ ವಿವಿಗಳ ಕ್ಯಾಂಪಸ್, ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್: ಸಚಿವ ಎಂ.ಬಿ. ಪಾಟೀಲ್ ಘೋಷಣೆಐಸಿಎಐ 'ಸಂವಾದ' ಸಮ್ಮೇಳನ ಉದ್ಘಾಟನೆ: ಸಿಎ ವೃತ್ತಿಪರರ ಜ್ಞಾನ ಹಂಚಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘನೆಪ್ಯಾರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕೆ.ಎಸ್. ಶಿಲ್ಪಾಗೆ ಸನ್ಮಾನ: ಗ್ರೂಪ್ 'ಬಿ' ಉದ್ಯೋಗ ಘೋಷಣೆ