Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಧಾನ ಪರಿಷತ್ ಕಾಂಗ್ರೆಸ್‌ ಸೋಲು: 26 ಶಾಸಕರು ರಾಜೀನಾಮೆ ನೀಡಲಿ - ಕೆ.ಎನ್. ರಾಜಣ್ಣ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಗ್ನೇಯ ಪದವೀಧರ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿರುವುದಕ್ಕೆ ಜವಾಬ್ದಾರಿ ಹೊತ್ತು, ತಾವೂ ಸೇರಿದಂತೆ ಭಾಗದ ಎಲ್ಲಾ 26 ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಆಗ್ರಹಿಸಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬರುವ 35 ವಿಧಾನಸಭಾ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದರೂ ಪಕ್ಷವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಪಕ್ಷದ ನಿರ್ಣಯವನ್ನು ಜವಾಬ್ದಾರಿಯಿಂದ ಈಡೇರಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಸ್ವಪಕ್ಷದ ವೈಫಲ್ಯವನ್ನು ಒಪ್ಪಿಕೊಂಡರು.

ಸ್ಟಿಂಗ್ ಆಪರೇಷನ್ ಪರಿಣಾಮ: ವಿದ್ಯಾವಂತ ಮತದಾರರು ಪ್ರತಿಯೊಂದು ವಿಚಾರವನ್ನೂ ತೂಗಿ ನೋಡಿ ಮತ ಚಲಾಯಿಸುತ್ತಾರೆ. ಇತ್ತೀಚೆಗೆ ನಡೆದ ಸ್ಟಿಂಗ್ ಆಪರೇಷನ್ ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಮತದಾರರು ತಮ್ಮ ಅಸಮಾಧಾನವನ್ನು ಈ ರೀತಿ ವ್ಯಕ್ತಪಡಿಸಿರುವ ಸಾಧ್ಯತೆಯಿದೆ ಎಂದರು.

ಸಿದ್ದರಾಮಯ್ಯ ನಾಯಕತ್ವದ ಗೊಂದಲ: 2028ರ ಚುನಾವಣೆಯ ನಾಯಕತ್ವದ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟತೆ ನೀಡಬೇಕಿದೆ. ಮುಂದಿನ ಬಾರಿ ಸ್ಪರ್ಧಿಸುವುದಿಲ್ಲ ಹಾಗೂ ಪ್ರಚಾರಕ್ಕೆ ಹೋಗುವುದಿಲ್ಲ ಎಂಬ ಅವರ ಹೇಳಿಕೆಗಳು ಜನರಲ್ಲಿ ಗೊಂದಲ ಮೂಡಿಸಿದ್ದು, ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.

ರಾಹುಲ್ ಗಾಂಧಿ ಭೇಟಿ: ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ, ಸ್ಟಿಂಗ್ ಆಪರೇಷನ್‌ನಿಂದ ಪಕ್ಷಕ್ಕಾಗುತ್ತಿರುವ ಧಕ್ಕೆ ಹಾಗೂ ತಮ್ಮ ಚಾರಿತ್ರ್ಯ ಹರಣದ ಬಗ್ಗೆ ವಿವರವಾಗಿ ಒನ್-ಟು-ಒನ್ ಚರ್ಚೆ ನಡೆಸಿದ್ದಾರೆ ಎಂದು ರಾಜಣ್ಣ ತಿಳಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಚ್ಚವನಹಳ್ಳಿ: ಹಿರಿಯ ಕಾಂಗ್ರೆಸ್ ಮುಖಂಡ ಡಾ. ಕೆ.ಟಿ. ಪ್ರಕಾಶ್ ವಿಧಿವಶಕಾಡುಗೊಲ್ಲ ಪರಿಶಿಷ್ಟ ಪಂಗಡ ಸೇರ್ಪಡೆ ಶಿಫಾರಸ್ಸು : ಕೇಂದ್ರ ಸರ್ಕಾರದಿಂದ ತಿರಸ್ಕಾರ, ಪುಃನ ಶಿಫಾರಸ್ಸಿಗೆ ಸರ್ಕಾರದ ಚಿಂತನೆ- ಮುಖ್ಯಮಂತ್ರಿಭದ್ರಾ ಮೇಲ್ದಂಡೆ ಅನುದಾನ 5,300 ಕೋಟಿ; ಬಿಜೆಪಿ ದನಿ ಎತ್ತುತ್ತಿಲ್ಲರಸ್ತೆ ಅಪಘಾತ ಬೈಕ್ ಸವಾರನಿಗೆ ಗಾಯ, ನಗರಸಭೆ ವಿರುದ್ಧ ಆಕ್ರೋಶ'ಅಖಿಲ ಭಾರತೀಯ ಸಾಹಿತ್ಯ ಪರಿಷತ್' ಜಾನಪದ ಪ್ರಕಾರದ ಜಿಲ್ಲಾ ಘಟಕ ಉದ್ಘಾಟನೆಹರಿಯಬ್ಬೆ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ: ಕಲಾವಿದ ಜಿ.ಡಿ. ತಿಮ್ಮಯ್ಯ ಅವರಿಗೆ ಸನ್ಮಾನವ್ಯಾಪಾರ ಮಾಡುವ ಹಕ್ಕಿಗೂ ಬೆಲೆ ಇರಬೇಕು: ಸುಪ್ರೀಂ ಕೋರ್ಟ್ಕೋರ್ಟ್ ಆದೇಶ ಮೀರಿ ಪಟಾಕಿ ಮಾರಾಟ: ಸುಪ್ರೀಂ ಅಸಮಾಧಾನಕಾಂಗ್ರೆಸ್ ಅರಾಜಕತೆ ಸೃಷ್ಟಿಸಿದರೆ ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ: ಛಲವಾದಿ ನಾರಾಯಣಸ್ವಾಮಿವಿಜಯೇಂದ್ರ ಏಕವಚನ ನಿಂದನೆ: ಬಿಎಸ್‌ವೈ ಮನೆ ಮುಂದೆ 'ಆರ್‌ಟಿಜಿಎಸ್ ಚೋರ್' ಪೋಸ್ಟರ್‌ಪ್ರತ್ಯಕ್ಷ!