ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣ ದ ಕಡೆಯ ಮುಖ್ಯ ರಸ್ತೆಯಲ್ಲಿ ಆಮೆ ಗತಿಯ ಒಳ ಚರಂಡಿಯ ಕಾಮಾಗಾರಿ ನಡೆಯುತ್ತಿದ್ದು ಕಾಮಗಾರಿ ಪ್ರಾರಂಭವಾಗಿ ವರ್ಷ ಸಮೀಪಿಸುತ್ತಿದ್ದರು.
ಈ ತನಕ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲದರ ಪರಿಣಾಮ ನಗರದ ರಂಗಪ್ಪ ಸರ್ಕಲ್ ಸಮೀಪ ಬೈಕ್ ಸವಾರರರೊಬ್ಬರು ರಸ್ತೆಯಲ್ಲಿನ ಉಬ್ಬಿನ ಮ್ಯಾನ್ ಹೋಲ್ ಮೇಲೆ ಬೈಕ್ ಹತ್ತಿಸಿದ ಪರಿಣಾಮ ಕೆಳಬಿದ್ದು ಗಂಬೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಸವಾರನನ್ನು ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ರಸ್ತೆ ಸರಿಪಡಿಸಲು ಹಲವಾರು ಸಂಘಟನೆಗಳು ಮನವಿ ನೀಡಿದ್ದರು ಕ್ರಮ ಕೈಗೊಳ್ಳದ ನಗರಸಭೆ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




