i
ಪಕ್ಕದ ಮನೆಯವನೊಂದಿಗೆ ಸಂಬಂಧ ಹೊಂದಿದ್ದ ಅಪ್ರಾಪ್ತ ಸಹೋದರಿ ಹತ್ಯೆ…
ಚಂದ್ರವಳ್ಳಿ ನ್ಯೂಸ್, ಉತ್ತರ ಪ್ರದೇಶ/ಲಕ್ನೋ:
ಪಕ್ಕದ ಮನೆಯವನೊಂದಿಗೆ ಸಂಬಂಧ ಹೊಂದಿದ್ದ ಅಪ್ರಾಪ್ತ ಸಹೋದರಿಯನ್ನು ಬರ್ಬರವಾಗಿ ಕಡಿದು ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೊಲೆಯ ನಂತರ ಆರೋಪಿ ಸಹೋದರ ಪೊಲೀಸರ ಮುಂದೆ ಶರಣಾಗಲು ಕತ್ರಾ ಬಜಾರ್ ಪೊಲೀಸ್ ಠಾಣೆಗೆ ಕಲೀಂ ಹೋಗಿದ್ದಾನೆ.
ಆರೋಪಿ ತನ್ನ 16 ವರ್ಷದ ಸಹೋದರಿ ನೆರೆಹೊರೆಯವರೊಂದಿಗೆ ಸಂಬಂಧ ಹೊಂದಿದ್ದರಿಂದ ಅಸಮಾಧಾನಗೊಂಡು ಇಂತಹ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿಂದೆ ಸಹೋದರಿ ಬಾಲಕನೊಂದಿಗೆ ಮಾತನಾಡುವಾಗ ಸಿಕ್ಕಿಬಿದ್ದಿದ್ದಕ್ಕೆ ಆರೋಪಿ ಥಳಿಸಿದ್ದನು ಎನ್ನಲಾಗಿದೆ. ಸಹೋದರಿ ಮತ್ತೆ ಅವನ ಸಂಪರ್ಕ ಹೊಂದಿದ್ದರಿಂದಾಗಿ ಕಡಿದು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿ ತಾಯಿಯ ದೂರಿನ ನಂತರ ಆರೋಪಿಯ ವಿರುದ್ಧ ಕೊಲೆಯ ಎಫ್ಐಆರ್ ದಾಖಲಿಸಲಾಗಿದೆ. ಕಲೀಂನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಕೊಲ್ಲಲು ಬಳಸಿದ ಮೊನಚಾದ ಆಯುಧ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮುನ್ನಾ ಉಪಾಧ್ಯಾಯ ತಿಳಿಸಿದ್ದಾರೆ.