i
ಕನ್ನಡ ಮತ್ತು ಉರ್ದು ಭಾಷೆ ಮಾತನಾಡುವ ತಾಯಿ-ಮಗು ಕಣ್ಮರೆ…
ಚಂದ್ರವಳ್ಳಿನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕು ಎಂ.ಕೆ.ಹಟ್ಟಿ ಗ್ರಾಮದ ಮುಬಿನಾ ಗಂಡ ಮಹಮ್ಮದ್ ಹಯಾತ್ (36 ವರ್ಷ), ಮಗು ಸಿದ್ರಾ ಫಾತೀಮಾ (7 ವರ್ಷ) ಇವರು 2021ರ ಜನವರಿ 02ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ತಾಯಿಯ ಚಹರೆ ಇಂತಿದೆ. ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5 ಅಡಿ ಎತ್ತರ, ತಲೆಯಲಿ ಸುಮಾರು 14 ಇಂಚು ಉದ್ದದಕಪ್ಪು ಕೂದಲು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾಳೆ. ಕೇಸರಿ ಬಣ್ಣದ ಚೂಡಿ ಟಾಪ್ ಮತ್ತು ವೇಲ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ.
ಕಾಣೆಯಾದ ಮಗುವಿನ ಚಹರೆ ಇಂತಿದೆ. ಕೋಲುಮುಖ, ಎಣ್ಣೆಗೆಂಪು ಮೈ ಬಣ್ಣ, 2 ಅಡಿ ಎತ್ತರ, ತೆಳುವಾದ ಮೈ ಕಟ್ಟು, ಬಾಬ್ ಕಟೀಂಗ್ ಮಾಡಿಸಿರುತ್ತದೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾಳೆ. ಮೇಲ್ಕಂಡ ಚಹರೆಯುಳ್ಳ ತಾಯಿ, ಮಗು ಪತ್ತೆಯಾದಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.