i
ಪ್ರವೇಶಾತಿ ಪ್ರಕ್ರಿಯೆಯ ದಿನಾಂಕ ಮರು ನಿಗದಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ವಿಶ್ವವಿದ್ಯಾಲಯದ ಅಧಿಸೂಚನೆಯ ಇದೇ ಸಮಸಂಖ್ಯೆ ದಿನಾಂಕ 27.10.2022 ರಂತೆ ಸಮಾಜ ಕಾರ್ಯ ವಿಭಾಗದ ಸ್ನಾತಕೋತ್ತರ ಪದವಿ ಕೋರ್ಸಿನ ಅಭ್ಯರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯ ದಿನಾಂಕಗಳನ್ನು ಮರು ನಿಗದಿಪಡಿಸಿದ್ದು, ಸಮಾಜಕಾರ್ಯ ವಿಭಾಗದ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸುವ ದಿನಾಂಕ (Entrance Exam Date) 06.12.2022, ಅಂತಿಮಜೇಷ್ಠತಾ ಪಟ್ಟಿ ಪ್ರಕಟಿಸುವ ದಿನಾಂಕ (Announcement of Merit list) 08.12.2022 ಹಾಗೂ ಆಫ್ಲೈನ್ ಮುಖಾಂತರ ಸಮಾಜಕಾರ್ಯ ವಿಭಾಗದ ಪ್ರವೇಶ ಪ್ರಕ್ರಿಯೆನಡೆಯುವ ದಿನಾಂಕ (Offline Counselling Date) 10.12.2022 ಆಗಿರುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.