i
ಕಿಚ್ಚ ಸುದೀಪ್ ನಡೆಸಿದ ಬಿಗ್ ಬಾಸ್ 9ರ ವಿಜೇತ ನಟ ರೂಪೇಶ್ ಶೆಟ್ಟಿ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಿಚ್ಚ ಸುದೀಪ್ ನೇತೃತ್ವದಲ್ಲಿ ಕಲರ್ಸ್ ಕನ್ನಡ ವಾಹಿನಿ ನಡೆಸಿಕೊಟ್ಟ ಬಿಗ್ ಬಾಸ್ 9 ರ ವಿಜೇತರಾಗಿ ಕರಾವಳಿಯ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಗಿರಿಗಿಟ್ ಚಿತ್ರದ ತುಳುನಾಡಿನ ಪ್ರೇಕ್ಷಕರ ಮನಗೆದ್ದ ನಟ ಈಗ ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗರ ಮನ ಗೆದಿದ್ದಾರೆ.
ಬಿಗ್ ಬಾಸ್ ಗೆ ಒಟಿಟಿ ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್ನಲ್ಲಿಯೂ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗಗೆ ಟಫ್ ಫೈಟ್ ಕೊಟ್ಟು, ಬಿಗ್ ಬಾಸ್ ವಿನ್ನರ್ ಟ್ರೋಪಿಯನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ರೂಪೇಶ್ ಶೆಟ್ಟಿ ಗೆಲವು ಕನ್ನಡಿಗರಿಗೆ, ತುಳುನಾಡಿನ ಸಮಸ್ತ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ರೂಪೇಶ್ ಶೆಟ್ಟಿಗೆ ಪಡೆದ ಹಣ ಎಷ್ಟು-
ಬಿಗ್ ಬಾಸ್ 9ರ ಸೀಜನ್ ಗೆ ಒಟ್ಟು 18 ಮಂದಿ ಎಂಟ್ರಿ ಕೊಟ್ಟಿದ್ದರು. ಫಿನಾಲೆಗೆ ಐವರು ತಲುಪಿದ್ದರು. ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ದೀಪಿಕಾ ದಾಸ್, ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದರು. ಶನಿವಾರ ನಡೆದ ಎಪಿಸೋಡ್ನಲ್ಲಿ ದಿವ್ಯಾ ಔಟ್ ಆಗಿದ್ದಾರೆ. ಉಳಿದ ನಾಲ್ವರಲ್ಲಿ ರೂಪೇಶ್ ವಿನ್ ಆಗಿದ್ದಾರೆ.
ಈ ಬಾರಿ ‘ಬಿಗ್ ಬಾಸ್ ಕನ್ನಡ‘ ಗೆದ್ದ ಸ್ಪರ್ಧಿಗೆ 60 ಲಕ್ಷ ರೂಪಾಯಿ ಸಿಕ್ಕಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ಟ್ಯಾಕ್ಸ್ ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ. ಕಟ್ ಆಗಲಿದೆ. ಅಂದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42 ಲಕ್ಷ ರೂ. ನಗದು ಸಿಗಲಿದೆ. ಹತ್ತು ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಹಣ ಗೆದ್ದ ಸ್ಪರ್ಧಿಗೆ ಮಾತ್ರ ಈ ತೆರಿಗೆ ಅನ್ವಯ ಆಗಲಿದೆ. ಕೌನ್ ಬನೇಗಾ ಕರೋಡ್ಪತಿ ಸೇರಿ ಮನರಂಜನೆಗೆ ಸಂಬಂಧಿಸಿದ ಎಲ್ಲಾ ಶೋಗೆ ಈ ತೆರಿಗೆ ಸ್ಲ್ಯಾಬ್ ಅನ್ವಯ ಆಗಲಿದೆ.