i
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡ್ರೋನ್ ಮೂಲಕ ರಾಜ್ಯದ ಎಲ್ಲ ರೈತರ ಭೂಮಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಆಸ್ತಿ ವಿವರಗಳನ್ನು ಸಂಪೂರ್ಣ ಡಿಜಿಟಲ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಒಂದು ವರ್ಷದೊಳಗೆ ಡ್ರೋನ್ ಮೂಲಕ ಸರ್ವ ಕಾರ್ಯ ಪೂರ್ಣಗೊಳಿಸಲಿದ್ದು, ಆಸ್ತಿ ವಿವರ ಸಂಪೂರ್ಣ ಡಿಜಿಟಲೀಕರಣ ಮಾಡಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ರೈತರು ಭೂ ವಿವಾದಗಳು, ನಕಲಿ ದಾಖಲೆಗಳ ಸೃಷ್ಠಿ, ಕಂದಾಯ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ ಎಂದು ಹೇಳಿದರು.