i
ದ್ಯಾಮಲಾಂಬ ದೇವಿ ಟ್ರಸ್ಟ್ ಧರ್ಮದರ್ಶಿ ಸಿಎ ಚಂದ್ರಣ್ಣನವರ ಪತ್ನಿ ಗೀತಾ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಖ್ಯಾತ ಚಾರ್ಟೆಡ್ ಅಕೌಂಟೆಂಟ್, ಹಿರೇಗುಂಟನೂರು ದ್ಯಾಮಲಾಂಬ ದೇವಿ ಟ್ರಸ್ಟ್ ಧರ್ಮದರ್ಶಿ ಇ.ಚಂದ್ರಣ್ಣನವರ ಧರ್ಮ ಪತ್ನಿ ಗೀತಾ (64) ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ಮೃತರಿಗೆ ಪತಿ ಸಿಎ ಇ ಚಂದ್ರಣ್ಣ, ಪುತ್ರಿಯರಾದ ಶಾಂತಲಾ, ಶೃತಿ, ಪುತ್ರ ಶ್ರೇಯಸ್, ಅಳಿಯಂದಿರಾದ ಪ್ರಶಾಂತ್, ದಿಲೀಪ್, ಸೊಸೆ ಪೂಜಾ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ: ಮೃತರ ಅಂತ್ಯ ಕ್ರಿಯೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರಿನ ತೋಟದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.