i
ಕೋಟೆ ನಾಡಿನ ಮೊಟ್ಟ ಮೊದಲ ಬೆಸ್ಟ್ ಪೋಸರ್ 2023 ಪ್ರಶಸ್ತಿಗೆ ಬಾಜನರಾದ ದರ್ಶನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ವತಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ವ್ಯಾಯಾಮ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ ಚಿತ್ರದುರ್ಗ ನಗರದ ದರ್ಶನ್ ಜಿ ಜಾಧವ್ ರವರು ಬೆಸ್ಟ್ ಪೋಸರ್ 20 23 ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಇವರು ಕಳೆದ ಎರಡು ದಶಕದ ಚಿತ್ರದುರ್ಗ ಜಿಲ್ಲೆಯ ಯಾವೊಬ್ಬ ಬಾಡಿ ಬಿಲ್ಡರ್ ಈ ಪ್ರಶಸ್ತಿಯನ್ನು ಗೆದ್ದಿಲ್ಲ. ಇವರೇ ಮೊಟ್ಟ ಮೊದಲ ಬೆಸ್ಟ್ ಫೋಜರ್ ಪ್ರಶಸ್ತಿಯನ್ನು ಗಳಿಸಿರುವುದು ಎಂದು ಚಿತ್ರದುರ್ಗ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಎನ್ ಡಿ ಕುಮಾರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೋಚ್ ರಾಕೇಶ್ ರವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.