i
ಹಿರಿಯೂರಲ್ಲಿ ಹಾಡುಹಗಲೇ ಕಾಡು ಕೋಣ ಪ್ರತ್ಯಕ್ಷ, ಆತಂಕದಲ್ಲಿ ಜನತೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: Wild Buffalo
ರಾತ್ರಿ ಅಥವಾ ಮುಂಜಾನೆಯ ವೇಳೆ ಕಾಣಿಸಿಕೊಳ್ಳುವ ಕಾಡು ಕೋಣಗಳು ಹಿರಿಯೂರು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಹಾಡುಹಗಲೇ ಪ್ರತ್ಯಕ್ಷವಾಗಿದೆ.
ಕಳೆದೆರಡು ದಿನಗಳಿಂದೆ ಹಿರಿಯೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿದ್ದ ಕಾಡು ಕೋಣ ನಡು ಮಧ್ಯಾಹ್ನವೇ ಜನವಸತಿ ಪ್ರದೇಶಕ್ಕೆ ಕಾಡುಕೋಣ ನುಗ್ಗಿದೆ.
ನಾಯಿ ಮತ್ತು ಜನಗಳ ಕೂಗಾಟಕ್ಕೆ ಬೆಚ್ಚಿದ ಕಾಡುಕೋಣ ವೇದಾವತಿ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಓಡುತ್ತಿರುವ ಭಾರಿ ಗಾತ್ರದ ಕಾಡುಕೋಣವನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.
ಭದ್ರಾವತಿ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡಿರುವ ಕಾಡುಕೋಣವನ್ನು ಸೆರೆ ಹಿಡಿಯಲು ಭದ್ರಾವತಿಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾರಿ ಗಾತ್ರದ ಕೋಣ ಸೆರೆಹಿಡಿಯಲು ಆಗಮಿಸುತ್ತಿದ್ದಾರೆ ಎನ್ನಲಾಗಿದೆ.