i
ಸಾರ್ವಜನಿಕರು ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಸೂಚನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಯಾವುದೇ ಕೇಂದ್ರೀಯ ಸಂರಕ್ಷಿತ ಸ್ಮಾರಕಗಳ ಸುತ್ತಲೂ 300 ಮೀಟರ್ ಒಳಗೆ ಯಾವುದೇ ದುರಸ್ತಿ, ನವೀಕರಣ, ನಿರ್ಮಾಣಕ್ಕಾಗಿ ANCIENT MONUMENTS ANE ARCHAEOLOGICAL SITES AND REMAINS (AMENDMENT AND VALIDATION) ACT 2010 ರ ಪ್ರಕಾರ ನಿರಾಕ್ಷೇಪಣಾ ಪತ್ರ (ಎನ್ಓಸಿ) ಪಡೆಯಬೇಕು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.
ಸಾರ್ವಜನಿಕರು NOC ONLINE APPLICATION AND PROCESSING SYSTEM (NOAPS) ಮೂಲಕ https://nmanoc.nic.in ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಅರ್ಜಿಗಳನ್ನು COMPETENT AUTHOROTY (KARNATAKA), NATIONAL MONUMENT AUTHORITY, KSIMC BUILDING, INDUSTRIAL ESTATE, RAJAJINAGAR, BENGALURU-560010 ಗೆ ಸಲ್ಲಿಸಬಹುದು.
ಯಾವುದೇ ಮೂರನೇ ವ್ಯಕ್ತಿ, ಮಧ್ಯವರ್ತಿಗಳನ್ನು NMA/COMPETENT AUTHORITY (KARNATAKA) ತೊಡಗಿಸಿಕೊಳ್ಳುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-23409597 ನ್ನು ಸಂಪರ್ಕಿಸಬಹುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.