i
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ಸಂಪೂರ್ಣ ಮಾಹಿತಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗಿರುವ ಕಾರ್ಯ ಸಂಪೂರ್ಣಗೊಂಡಿದೆ.
ಹಾಲಿ ಇದ್ದ ಕ್ಷೇತ್ರಗಳಲ್ಲಿನ ಸದಸ್ಯರ ಸಂಖ್ಯಾಬಲವನ್ನು ಮರುಹೊಂದಾಣಿಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಅಂತಿಮ ಅಧಿಸೂಚನೆ ಪ್ರಕಟಿಸಿದೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ 37 ಹಾಗೂ ಜಿಲ್ಲೆಯ ಆರು ತಾಲೂಕು ಪಂಚಾಯಿತಿಗಳಿಗೆ 125 ಕ್ಷೇತ್ರಗಳಿಗೆ ನಿಗದಿ ಮಾಡಿ ಏರಿಕೆ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಹಾಲಿ ಸದಸ್ಯರುಗಳ ಸಂಖ್ಯೆಯನ್ನು 35 ರಿಂದ 37ಕ್ಕೆ ಏರಿಕೆ ಮಾಡಲಾಗಿದೆ. ಆದರೆ, ಜಿಲ್ಲೆಯ ಆರು ತಾಲೂಕು ಪಂಚಾಯಿತಿ ಸದಸ್ಯರ ಸಂಖ್ಯೆ 136 ರಿಂದ 125ಕ್ಕೆ ಇಳಿಕೆ ಮಾಡುವ ಮೂಲಕ ಹಲವು ಕ್ಷೇತ್ರಗಳನ್ನು ಕೈಬಿಡಲಾಗಿದೆ.
ಈ ಹಿಂದೆ 40 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ 10 ಸಾವಿರ ಜನಸಂಖ್ಯೆಗೆ ಒಂದು ತಾಲೂಕು ಪಂಚಾಯಿತಿ ಕ್ಷೇತ್ರವನ್ನು ವಿಂಗಡಣೆ ಮಾಡಲಾಗಿತ್ತು. ಪ್ರಸಕ್ತ ವರ್ಷ 35 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಮತ್ತು 12,500 ಜನಸಂಖ್ಯೆಗೆ ಒಂದು ತಾಲೂಕು ಪಂಚಾಯಿತಿ ಕ್ಷೇತ್ರ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳನ್ನೂ ಗುರುತಿಸಿ ಆದೇಶಿಸಲಾಗಿದೆ.
ಆದರೆ 2021ರಲ್ಲಿ ನಡೆದ ಜಿಲ್ಲಾ ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಹಾಲಿ ಇದ್ದ 35 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಬದಲಿಗೆ 41 ಕ್ಷೇತ್ರಕ್ಕೆ ಏರಿಕೆ ಮಾಡಲಾಗಿತ್ತು. ಆದರೆ ಈಗ 37 ಸ್ಥಾನಗಳಿಗೆ ಸೀಮಿತಗೊಳಿಸಿ ಆದೇಸಿಸಲಾಗಿದೆ.
ಅದೇ ರೀತಿ ಜಿಲ್ಲೆಯ ಆರು ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು 109ಕ್ಕೆ ಇಳಿಸಲಾಗಿತ್ತು. ಆದರೆ ಈಗ 125 ಸ್ಥಾನಗಳಿಗೆ ಏರಿಕೆ ಮಾಡಿ ಆದೇಶಿಸಲಾಗಿದೆ. ಅಂದು ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಆಯೋಗ ರಚಿಸಲಾಗಿತ್ತು. ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ.
ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು-
ಮೊಳಕಾಲ್ಮುರು- ರಾಂಪುರ, ನಾಗಸಮುದ್ರ, ಹಾನಗಲ್, ಬಿ.ಜಿ.ಕೆರೆ.
ಚಳ್ಳಕೆರೆ- ಹಿರೇಹಳ್ಳಿ, ತಳುಕು, ನೇರ್ಲಗುಂಟೆ, ದೊಡ್ಡ ಉಳಾರ್ತಿ, ಜಾಜೂರು, ಪರಶುರಾಂಪುರ, ದೊಡ್ಡೇರಿ, ನನ್ನಿವಾಳ.
ಚಿತ್ರದುರ್ಗ- ತುರುವನೂರು, ಭರಮಸಾಗರ, ಸಿರಿಗೆರೆ, ಲಕ್ಷ್ಮೀಸಾಗರ, ಡಿ.ಎಸ್.ಹಳ್ಳಿ, ಜಿ.ಆರ್.ಹಳ್ಳಿ, ಮೆದೇಹಳ್ಳಿ, ಹಿರೇಗುಂಟನೂರು.
ಹಿರಿಯೂರು- ಐಮಂಗಲ, ಮಸ್ಕಲ್, ಧರ್ಮಪುರ, ಹೊಸಯಳನಾಡು, ವಿ.ವಿ.ಪುರ, ಜವನಗೊಂಡನಹಳ್ಳಿ.
ಹೊಸದುರ್ಗ- ಮಾಡದಕೆರೆ, ಬಾಗೂರು, ಬೋಕಿಕೆರೆ, ಮತ್ತೋಡು, ಶ್ರೀರಾಂಪುರ, ಬೆಲಗೂರು.
ಹೊಳಲ್ಕೆರೆ- ಬಿ.ದುರ್ಗ, ಮಲ್ಲಾಡಿಹಳ್ಳಿ, ತಾಳ್ಯ, ಹೊರಕೆರೆದೇವರಪುರ, ರಾಮಗಿರಿ.
ಜಿಲ್ಲೆಯ ಆರು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ:–
ಮೊಳಕಾಲ್ಮೂರು:– ಜಹಗೀರ್ ಬುಡ್ಡೇನಹಳ್ಳಿ, ತಮ್ಮೇನಹಳ್ಳಿ, ರಾಂಪುರ, ದೇವಸಮುದ್ರ, ಸಿದ್ದಾಪುರ, ನಾಗಸಮುದ್ರ, ಚಿಕ್ಕೇರಹಳ್ಳಿ, ಹಾನಗಲ್, ರಾಯಪುರ, ತುಮಕೂರ್ಲಹಳ್ಳಿ, ಕೋನಸಾಗರ, ಕೊಂಡ್ಲಹಳ್ಳಿ, ಬಿ.ಜಿ.ಕೆರೆ.
ಚಳ್ಳಕೆರೆ:– ಮಲ್ಲೂರಹಳ್ಳಿ, ಹಿರೇಹಳ್ಳಿ, ಗೌರಸಮುದ್ರ, ತಳಕು, ಘಟಪರ್ತಿ, ದೇವರೆಡ್ಡಿಹಳ್ಳಿ, ನಲಗೇತನಹಟ್ಟಿ, ನೇರ್ಲಗುಂಟೆ, ಎನ್.ಮಹದೇವಪುರ, ದೊಡ್ಡ ಉಳ್ಳಾರ್ತಿ, ಮೈಲನಹಳ್ಳಿ, ಓಬಳಾಪುರ, ಜಾಜೂರು, ಮೀರಸಾಬಿಹಳ್ಳಿ, ಚೌಳೂರು, ಪರಶುರಾಂಪುರ, ಮಹದೇವಪುರ, ಟಿ.ಎನ್.ಕೋಟೆ, ಬುಡ್ನಹಟ್ಟಿ, ದೊಡ್ಡೇರಿ, ದೇವರಮರಿಕುಂಟೆ, ನನ್ನಿವಾಳ, ಸೋಮಗುದ್ದು, ಸಾಣಿಕೆರೆ, ಬೆಳಗೆರೆ.
ಚಿತ್ರದುರ್ಗ:– ತುರುವನೂರು, ಚಿಕ್ಕಗೊಂಡನಹಳ್ಳಿ, ಬೆಳಗಟ್ಟ, ಕೋಗುಂಡೆ, ಭರಮಸಾಗರ, ಕೊಳಹಾಳು, ಯಳಗೋಡು, ಅಳಗವಾಡಿ, ಸಿರಿಗೆರೆ, ಲಕ್ಷ್ಮಿಸಾಗರ, ಆಲಗಟ್ಟ, ಬೊಮ್ಮೇನಹಳ್ಳಿ, ಹಿರೇಕಬ್ಬಿಗೆರೆ, ಜಿ.ಆರ್.ಹಳ್ಳಿ, ಮದಕರಿಪುರ, ದ್ಯಾಮವ್ವನಹಳ್ಳಿ, ಡಿ.ಎಸ್.ಹಳ್ಳಿ, ಜೆ.ಎನ್.ಕೋಟೆ, ಎಂ.ಕೆ.ಹಟ್ಟಿ, ಜಾನುಕೊಂಡ, ಮೆದೇಹಳ್ಳಿ, ಹಿರೇಗುಂಟನೂರು, ಭೀಮಸಮುದ್ರ, ಅನ್ನೇಹಾಳು.
ಹಿರಿಯೂರು:– ಮರಡಿಹಳ್ಳಿ, ಐಮಂಗಲ, ಸೂರಗೊಂಡನಹಳ್ಳಿ, ಯರಬಳ್ಳಿ, ರಂಗೇನಹಳ್ಳಿ, ಹರ್ತಿಕೋಟೆ, ಮಸ್ಕಲ್, ಕಣಜನಹಳ್ಳಿ, ಖಂಡೇನಹಳ್ಳಿ, ಧರ್ಮಪುರ, ಹರಿಯಬ್ಬೆ, ಹೂವಿನಹೊಳೆ, ಹೊಸಯಳನಾಡು, ಇಕ್ಕನೂರು, ಕಸ್ತೂರಿ ರಂಗಪ್ಪನಹಳ್ಳಿ, ಆದಿವಾಲ, ಬಬ್ಬೂರು, ವಿ.ವಿ.ಪುರ, ಹಿಂಡಸಕಟ್ಟೆ, ಯಲ್ಲದಕೆರೆ, ದಿಂಡಾವರ, ಜವನಗೊಂಡನಹಳ್ಳಿ, ಕರಿಯಾಲ.
ಹೊಸದುರ್ಗ:– ಅತ್ತಿಮಗೆ, ಮಾಡದಕೆರೆ, ಜಾನಕಲ್ಲು, ದೊಡ್ಡಘಟ್ಟ, ದೇವಿಗೆರೆ, ಮಲ್ಲಪ್ಪನಹಳ್ಳಿ, ಬಾಗೂರು, ದೇವಪುರ, ಹುಣವಿನಡು, ಬೋಕಿಕೆರೆ, ಸಾಣೇಹಳ್ಳಿ, ಕೆಲ್ಲೋಡು, ಮತ್ತೋಡು, ಗುಡ್ಡದನೇರಲಕೆರೆ, ದೊಡ್ಡ ತೇಕಲವಟ್ಟಿ, ಬಲ್ಲಾಳಸಮುದ್ರ, ಬೆಲಗೂರು, ತಂಡಗ, ಕಂಚೀಪುರ, ಶ್ರೀರಾಂಪುರ, ಹೆಗ್ಗೆರೆ.
ಹೊಳಲ್ಕೆರೆ:– ಅಂದನೂರು, ಬಿ.ದುರ್ಗ, ಹಿರೇಕಂದವಾಡಿ, ಚಿಕ್ಕಜಾಜೂರು, ಹಿರೇ ಎಮ್ಮಿಗನೂರು, ಮಲ್ಲಾಡಿಹಳ್ಳಿ, ಗುಂಡಿಮಡು, ಆಡನೂರು, ಚಿತ್ರಹಳ್ಳಿ, ಬಂಜಗೊಂಡನಹಳ್ಳಿ, ಹೊರಕೆರೆದೇವರಪುರ, ಉಪ್ಪರಿಗೇನಹಳ್ಳಿ, ತಾಳ್ಯ, ನಾರಾಯಣಗೊಂಡನಹಳ್ಳಿ, ಗುಂಡೇರಿ, ರಾಮಗಿರಿ, ದುಮ್ಮಿ, ತಾಳಿಕಟ್ಟೆ, ಬಿದರಕೆರೆ.
ಜಿಲ್ಲೆಯ ಆರು ತಾಲೂಕುಗಳ ಜಿಪಂ-ತಾಪಂ ಕ್ಷೇತ್ರಗಳ ಮಾಹಿತಿ:–
ತಾಲೂಕು ಕೇಂದ್ರ ಜಿ.ಪಂ. ತಾ.ಪಂ
ಮೊಳಕಾಲ್ಮೂರು 4 13
ಹೊಳಲ್ಕೆರೆ 5 19
ಹೊಸದುರ್ಗ 6 21
ಹಿರಿಯೂರು 6 23
ಚಿತ್ರದುರ್ಗ 8 24
ಚಳ್ಳಕೆರೆ 8 25
ಒಟ್ಟು ಸ್ಥಾನಗಳು 37 125