
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, SDA FDA ಅಂತಿಮ ಆಯ್ಕೆಪಟ್ಟಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿರುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ-1122 ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 24847/2022/GM-CCಕ್ಕೆ ನ್ಯಾಯಾಲಯದ ಮಧ್ಯಂತರ ಆದೇಶದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು, ಇಲ್ಲಿಗೆ ಪರಿಶಿಷ್ಟ ಜಾತಿ/ಗ್ರಾಮೀಣ ಮೀಸಲಾತಿಯ ಒಂದು ಹುದ್ದೆಯನ್ನು ಕಾಯ್ದಿರಿಸಿ, ಉಳಿದ ಹುದ್ದೆಗಳಿಗೆ ದಿನಾಂಕ:09-01-2023ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಪ್ರಸ್ತುತ ಸದರಿ ಪ್ರಕರಣಕ್ಕೆ ನ್ಯಾಯಾಲಯದ ಅಂತಿಮ ಆದೇಶದಂತೆ, ಸದರಿ ಇಲಾಖೆಗೆ ಕಾಯ್ದಿರಿಸಲಾಗಿದ್ದ, ಪರಿಶಿಷ್ಟ ಜಾತಿ/ಗ್ರಾಮೀಣ ಮೀಸಲಾತಿಯ 01 ಹುದ್ದೆಗೆ ಹೇಮಂತ್ ಕುಮಾರ್ (ನೋಂ.ಸಂ.8293108) ಇವರನ್ನು ನಿಯಮಾನುಸಾರ ಪರಿಗಣಿಸಿ, ಸಿದ್ಧಪಡಿಸಲಾದ ಸದರಿ ಇಲಾಖೆಯ ಪರಿಷ್ಕøತ ಅಂತಿಮ ಆಯ್ಕೆಪಟ್ಟಿ ಹಾಗೂ ಕಟ್ಆಫ್ ಅಂಕಗಳ ಪಟ್ಟಿಯನ್ನು ಆಯೋಗದ ವೆಬ್ಸೈಟ್ http://kpsc.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.