
ಕೋಟೆ ನಾಡಿನ ಪಾರ್ಕ್ ಗಳ ಅಭಿವೃದ್ಧಿಗೆ 9 ಕೋಟಿ ರೂ.ನೀಡಿಕೆ-ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಂಬತ್ತು ಕೋಟಿ ವೆಚ್ಚದಲ್ಲಿ ಉಳಿದ ಎಲ್ಲಾ ಪಾರ್ಕ್ ಗಳ ಅಭಿವೃದ್ಧಿ ಮಾಡಲಾಗುತ್ತದೆ. ನಿರ್ಮಾಣವಾಗಿರುವ ಪಾರ್ಕಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸ್ಥಳೀಯರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಎಸ್.ಬಿ ಲೇಔಟ್, ವಿಶ್ವೇಶ್ವರಯ್ಯ ಬಡಾವಣೆ, ಮರಳಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಪಾರ್ಕ್ ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬೀದಿ ದೀಪಗಳು, ಪಾರ್ಕ್ ಗಳು, ರಸ್ತೆಗಳನ್ನು ಮಾಡಲಾಗುತ್ತಿದೆ.ಇದರಲ್ಲಿ ಇಂದು ಎಸ್.ಬಿ.ಲೇ ಔಟ್ ನಲ್ಲಿ 32 ಲಕ್ಷ, ವಿಶ್ವೇಶ್ವರಯ್ಯ ಬಡಾವಣೆ 32 ಲಕ್ಷ, ಮರಳಯ್ಯ ಬಡಾವಣೆಯ ಅಭಿನಂದನ ಪಾರ್ಕ್ ಗೆ 17 ಲಕ್ಷ ಹಣವನ್ನು ನೀಡುವ ಮೂಲಕ ನೂತನ ಪಾರ್ಕಗಳ ಅಭಿವೃದ್ಧಿ ಮಾಡಲಾಗಿದೆ. ಪಾರ್ಕ್ ನಲ್ಲಿ ಮಕ್ಕಳ ಆಟವಾಡಲು ಆಟಿಕೆ ಅಳವಡಿಸಲಾಗಿದೆ. ಇನ್ನು ಕೇಲವು ಪಾರ್ಕ್ ನಲ್ಲಿ ಓಪನ್ ಜಿಮ್ ಮಾಡಲಾಗಿದೆ. ಅಲಂಕಾರಿಕ ದೀಪಗಳನ್ನು ಹಾಕಲಾಗದೆ. ಪಾರ್ಕ್ ಗಳನ್ನು ಸ್ಥಳೀಯರು ಒಂದು ಸಂಘ ಮಾಡಿಕೊಳ್ಳುವ ಮೂಲಕ ಸ್ವಚ್ಚತೆ ಕಾಪಡಿಕೊಳ್ಳಬೇಕು. ಇಲ್ಲದಿದ್ದರೆ ಪಾರ್ಕ್ ಹಾಳಾಗುತ್ತದೆ. ಅಧಿಕಾರಿಗಳ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಅಭಿವೃದ್ಧಿಗೆ ಕೈ ಜೋಡಿಸಬೇಕು. ಪಾರ್ಕ್ ಗಳ ಅಭಿವೃದ್ಧಿಯಿಂದ ಸಂಜೆ ವೇಳೆಯಲ್ಲಿ ಒತ್ತಡದಿಂದ ಮುಕ್ತವಾಗಿ ಸ್ವಲ್ಪ ಶಾಂತಿಯಿಂದ ಕಾಲ ಕಳೆಯುವ ವಾತವರಣ ನಿರ್ಮಾಣವಾಗುತ್ತದೆ ಎಂದು ಶಾಸಕರು ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸುಮಾರು 40 ಕ್ಕಿಂತ ಹೆಚ್ಚು ಪಾರ್ಕ್ ಗಳ ಅಭಿವೃದ್ಧಿ ಮಾಡಲಾಗಿದೆ. ನಮ್ಮ ಸರ್ಕಾರ ರಾಜ್ಯದ ಎಲ್ಲಾ ಪುರಸಭೆ, ಪಟ್ಟಣ ಪಂಚಾಯತಿ, ನಗರಸಭೆಗಳಿಗೆ ಹಣ ನೀಡಿದ್ದಾರೆ. ಅದರಂತೆ ನಮ್ಮನಗರಸಭೆಗೆ ನಗರೋತ್ಥಾನದಡಿ 40 ಕೋಟಿ ಹಣವನ್ನು ನೀಡಿದ್ದು ಅದರಲ್ಲಿ ಒಂಬತ್ತುವರೆ ಕೋಟಿ ಉಳಿದ ಪಾರ್ಕ್ ಗಖ ಅಭಿವೃದ್ಧಿಗೆ ನೀಡಿದ್ದು ಎಲ್ಲಾ ಪಾರ್ಕ್ ಗಳ ಅಭಿವೃದ್ಧಿ ಹಂತ ಹಂತವಾಗಿ ಮಾಡಲಾಗುತ್ತದೆ ಎಂದರು.
ಐತಿಹಾಸಿಕ ಯುನಿಯನ್ ಪಾರ್ಕ್, ಐಯುಡಿಪಿ, ಬ್ಯಾಂಕ್ ಕಾಲೋನಿ, ವೇಮನ ನಗರ, ಕೆಳಗೋಟೆ, ಧವಳಗಿರಿ, ಜೋಗಿಮಟ್ಟಿ ರಸ್ತೆ ಸಂಪರ್ಕಿಸುವ ಹಲವು ಕಡೆಗಳಲ್ಲಿ ಪಾರ್ಕ್ ಗಳ ಅಭಿವೃದ್ಧಿ ಮಾಡಲಾಗಿದೆ. ಈ ಭಾಗದಲ್ಲಿ ಎಲ್ಲಾ ಕಡೆ ಸಿ.ಸಿ.ರಸ್ತೆಗಳನ್ನು ಮಾಡಲಾಗಿದೆ. ಬೀದಿ ದೀಪ ಅಳವಡಿಸಲಾಗಿದ್ದು ಬಹುತೇಕ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುಗಿಸಿದ್ದು ಮುಂದಿನ ದಿನದಲ್ಲಿ ಬರುವ ಚುನಾವಣೆಯಲ್ಲಿ ಮತ್ತೆ ನಿಮ್ಮೆಲ್ಲರ ಆಶೀರ್ವಾದದಿಂದ ಗೆಲುವು ಸಾಧಿಸಿ ಉಳಿದ ಚಿಕ್ಕ ಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದ ಎಂದು ತಿಳಿಸಿದರು. ತರಳಬಾಳು ನಗರ ಸಂಘದ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಮಾತನಾಡಿ ಶಾಸಕ ತಿಪ್ಪಾರೆಡ್ಡಿ ಅವರು ಚಿತ್ರದುರ್ಗ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಎಲ್ಲಾ ಕಡೆ ಸಿ.ಸಿ.ರಸ್ತೆಗಳು, ಕುಡಿಯುವ ನೀರು ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ನಮ್ಮೆಲ್ಲರ ಎಳ್ಗೆಗೆ ಶ್ರಮಿಸಿದ್ದಾರೆ. ಅವರ ಪರವಾಗಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಮತ್ತಷ್ಟು ಅಭಿವೃದ್ಧಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುರೇಶ್ ಸಿದ್ದಾಪುರ, ನಗರಸಭೆ ಸದಸ್ಯ ಮಲ್ಲಿಕಾರ್ಜುನ್, ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರ ನಾಮ ನಿರ್ದೇಶನ ಸದಸ್ಯರಾದ ರೇಖಾ, ವಿ.ಆರ್.ನಾಗರಾಜ್, ರೈತ ರಾಜು, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಜಿ.ಹೆಚ್. ಸತ್ಯನಾರಾಯಣ, ಕಬೇರಪ್ಪ, ಪರಮೇಶ್ಚರಪ್ಪ, ರಘು, ಸಕ್ಕರಪ್ಪ ಇದ್ದರು.