i
ಚಿತ್ರದುರ್ಗದ ನಭದಲ್ಲಿ ಚಿನೂಕ್ ಹೆಲಿಕಾಫ್ಟರ್ (RLV-TD ನೌಕೆ)…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಏ.2ರಂದು ಭಾನುವಾರ ಬೆಳಿಗ್ಗೆ 7.10 ಕ್ಕೆ ಚಿತ್ರದುರ್ಗದ ನಭದಲ್ಲಿ ಚಿನೂಕ್ ಹೆಲಿಕಾಫ್ಟರ್, ವ್ಯೋಮ ನೌಕೆಯೊಂದನ್ನು 4.5 ಕಿಲೋಮೀಟರ್ ಎತ್ತರಕ್ಕೆ ಕೊಂಡೊಯ್ಯದು ಅಲ್ಲಿಂದ ಉಡಾವಣೆಗೊಂಡ ವಾಹನ 390 ಕಿ.ಮಿ/ಗಂಟೆ ವೇಗದಲ್ಲಿ ಭೂಮಿಗೆ ಬಂದು ನಿಗದಿತ ಸ್ಥಳ ಸೇರಿ, ಅದರ ನಿರ್ಮಾತೃಗಳಿಗೆ ಅತೀವ ಆನಂದ ಉಂಟು ಮಾಡಿದ ನೌಕೆ RLV-TD.
ಮರು ಬಳಕೆ ಮಾಡಬಹುದಾದ ಉಡಾವಣಾ ವಾಹನದ ಪರೀಕ್ಷೆ ISRO ದ ಹೆಮ್ಮೆ. ನಮ್ಮ ವಿಜ್ಞಾನಿಗಳ ಆಲೋಚನಾ ಕ್ರಮ ಪಕ್ಕಾ ದೇಶಿಯವಾದದ್ದು ಎಂಬುದಕ್ಕೆ ಉದಾಹರಣೆ. ಒಂದು ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಸಾವಿರಾರು ಕೋಟಿ ವೆಚ್ಚದಲ್ಲಿ ರಾಕೆಟ್ ತಯಾರಿಸಿ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ಆ ರಾಕೆಟ್ ಸಂಪೂರ್ಣ ನಾಶವಾಗುತ್ತಿದೆ.ಆದರೆ ಮುಂದಿನ ದಿನಗಳಲ್ಲಿ ನಮ್ಮ RLV-TD ವ್ಯೋಮ ವಾಹನ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ(ಪ್ರಯಾಣಿಕರನ್ನು ತನ್ನ ಸ್ಥಳಕ್ಕೆ ಬಿಟ್ಟು ಹಿಂತಿರುಗಿ ಸ್ಟಾಂಡ್ ಗೆ ಬಂದು ಪ್ರಯಾಣಿಕರಿಗಾಗಿ ಕಾಯುವ ಆಟೋದಂತೆ) ಹಿಂತಿರುಗಿ ಭೂಮಿಗೆ ಬಂದು,ನಿಗದಿತ ಸ್ಥಳದಲ್ಲಿ ಉಪಗ್ರಹಗಳನ್ನು ಮತ್ತೊಮ್ಮೆ ಹೊತ್ತೊಯ್ಯಲು ಕಾಯುತ್ತದೆ. ಇದರಿಂದ ಕೋಟಿ ಕೋಟಿ ಹಣ ಉಳಿಸಬಹುದಾಗಿದೆ.ಇತರೆ ದೇಶಗಳಿಗೆ ಮಾದರಿ. ಹ್ಯಾಟ್ಸ್ ಆಫ್ ಇಸ್ರೋ. ಎಂದು ವಿಜ್ಞಾನಿ ಸಂಸ್ಥೆಯ ಸಾಹಿತಿ ಮದಕರಿಪುರ ದಾಸೇಗೌಡ.ಎಂ.ಆರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.