i
ನವೋದಯ ಪ್ರವೇಶ ಪರೀಕ್ಷೆಗಾಗಿ ಏ.10 ರಿಂದ ವಿಶೇಷ ತರಬೇತಿ ತರಗತಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: navodaya moorarji
ನವೋದಯ ತರಬೇತಿ ಕೇಂದ್ರ ಹಿರಿಯೂರು ವತಿಯಿಂದ 2022 – 23ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯು ಏಪ್ರಿಲ್ 29 ಶನಿವಾರದಂದು ನಡೆಯಲಿದ್ದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಏಪ್ರಿಲ್ 10 ರಿಂದ ಏಪ್ರಿಲ್ 28 ರ ವರೆಗೆ ವಿಶೇಷ ತರಗತಿಗಳು ನಡೆಯಲಿವೆ.
ಪ್ರವೇಶ ಪರೀಕ್ಷೆಗೆ ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಮಾದರಿ ಪರೀಕ್ಷೆಗಳ ಅಂಕಗಳನ್ನು ಅಂದಿನ ದಿನದಂದೇ ತಿಳಿಸಲಾಗುತ್ತದೆ. ಇಬ್ಬರು ನುರಿತ ಶಿಕ್ಷಕರಿಂದ ತರಗತಿ ನಡೆಯುತ್ತದೆ.
ಪ್ರತಿನಿತ್ಯ ಈ ಹಿಂದೆ ನಡೆದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಂದಲೇ ಕಪ್ಪುಹಲಗೆಯಲ್ಲಿ ಬಿಡಿಸಲು ಮಾರ್ಗದರ್ಶನ ನೀಡಲಾಗುತ್ತದೆ.
ಈಗಾಗಲೇ ನಮ್ಮ ತರಬೇತಿಯಿಂದ ಆರು ಜನ ವಿದ್ಯಾರ್ಥಿಗಳು ನವೋದಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿ ನವೋದಯ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುತ್ತಾರೆ.
ಹಿರಿಯೂರು ನಗರದ ಬನಶಂಕರಿ ಕಲ್ಯಾಣ ಮಂಟಪ ಮುಂಭಾಗದಲ್ಲಿ ಬೆಳಗ್ಗೆ 10 ರಿಂದ 2 ರ ವರೆಗೆ ತರಗತಿ ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ 9686194485
ಶಿಕ್ಷಕಿ ಹೇಮಲತ ಮನವಿ ಮಾಡಿದ್ದಾರೆ.