i
ಪತ್ರಕರ್ತ ರವಿ ಉಗ್ರಾಣ ಅವರ ತಾಯಿ ಕೆಂಚಮ್ಮ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಬುರುಜನಹಟ್ಟಿ ವಾಸಿ, ಉಗ್ರಾಣದ ದಿವಂಗತ ಎಸ್. ಬಾಗೋಡಪ್ಪ ನವರ ಪತ್ನಿ ಕೆಂಚಮ್ಮ ನವರು (86) ಮಂಗಳವಾರ ನಿಧನರಾದರು.
ಮೃತರು ಪತ್ರಕರ್ತ ರವಿ ಉಗ್ರಾಣ ಸೇರಿದಂತೆ ಇಬ್ಬರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ. ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.