i
ಸರ್ಕಾರಿ ವೀಕ್ಷಣಾಲಯ ಸಂಸ್ಥೆಗೆ ಬಾಡಿಗೆಗೆ ಕೊಠಡಿ ಬೇಕಾಗಿದೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯನಿರ್ವಹಿಸಿತ್ತಿರುವ ಸರ್ಕಾರಿ ವೀಕ್ಷಣಾಲಯ (ಬಾಲಕರು) ಸಂಸ್ಥೆಗೆ ಚಿತ್ರದುರ್ಗ ನಗರದಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳನ್ನೊಳಗೊಂಡಿರುವ 3 ರಿಂದ 4 ಮಲಗುವ ಕೊಠಡಿಗಳು, 2 ಸ್ನಾನದ ಗೃಹ, 4 ಶೌಚಾಲಯ ಹಾಗೂ ಕಟ್ಟಡಕ್ಕೆ ಸೂಕ್ತ ಕಾಂಪೌಂಡ್ ಇರುವ ಕಟ್ಟಡ ಅಥವಾ ಮನೆ ತಾತ್ಕಾಲಿಕವಾಗಿ ಬಾಡಿಗೆಗೆ ಬೇಕಾಗಿದೆ.
ಚಿತ್ರದುರ್ಗ ನಗರದಲ್ಲಿ ಅಂತಹ ಕಟ್ಟಡ ಹೊಂದಿರುವ ಮಾಲೀಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲಭವನ ಆವರಣ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ ಈ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-295822, 8217710292, 9741812148, 8792325616 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.