i
ಪೊಲೀಸ್ ಮ್ಯಾರಥಾನ್: ದರ್ಶನ್, ದೀಕ್ಷಾ ಪ್ರಥಮ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ: Police Marathon: Darshan, Deeksha Pratham…
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ *ಸುವರ್ಣ ಮಹೋತ್ಸವ-2024ರ* ಅಂಗವಾಗಿ, *ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಪರಿಣಾಮಗಳ* ಕುರಿತು ಸಾರ್ವಜನಿಕರಲ್ಲಿ *ಜಾಗೃತಿ ಮೂಡಿಸುವ* ಸಲುವಾಗಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಈ ದಿನ *ದಿನಾಂಕಃ 10-03-2024 ರಂದು ಭಾನುವಾರ ಬೆಳಗ್ಗೆ* ಶಿವಮೊಗ್ಗ ನಗರದಲ್ಲಿ *Karnataka Police Run 5K ಮ್ಯಾರಥಾನ್ ಓಟವನ್ನು* ಹಮ್ಮಿಕೊಂಡಿದ್ದು, ಮಿಥುನ್ ಕುಮಾರ್ ಜಿ. ಕೆ. ಐಪಿಎಸ್* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು *ಹಸಿರು ನಿಶಾನೆ ತೋರುವ* ಮೂಲಕ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು. ಮ್ಯಾರಥಾನ್ ಓಟವನ್ನು *ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ* ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮುಖಾಂತರ ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ಬಂದು *ಮುಕ್ತಾಯ ಮಾಡಲಾಯಿತು.*
*ಪುರುಷರ ವಿಭಾಗದಲ್ಲಿ* ಪ್ರಥಮ ಸ್ಥಾನವನ್ನು *ದರ್ಶನ್ ಲಕ್ಕನವರ್, ಹುಬ್ಬಳ್ಳಿ,* ಕ್ರೀಡಾ ಮತ್ತು ಯುವಜನ ಇಲಾಖೆ ಶಿವಮೊಗ್ಗದ ವಿದ್ಯಾರ್ಥಿ, ದ್ವಿತೀಯ ಸ್ಥಾನವನ್ನು *ನಾಗರಾಜ್ ದಿವಾತೆ ಹುಬ್ಬಳ್ಳಿ,* ಕ್ರೀಡಾ ಮತ್ತು ಯುವಜನ ಇಲಾಖೆ ಶಿವಮೊಗ್ಗದ ವಿದ್ಯಾರ್ಥಿ, *ಮಹಿಳೆಯರ ವಿಭಾಗದಲ್ಲಿ* ಪ್ರಥಮ ಸ್ಥಾನವನ್ನು *ಹೆಚ್. ವಿ ದೀಕ್ಷಾ ಶಿವಮೊಗ್ಗ,* ಕ್ರೀಡಾ ಮತ್ತು ಯುವಜನ ಇಲಾಖೆ ಶಿವಮೊಗ್ಗದ ವಿದ್ಯಾರ್ಥಿನಿ ಮತ್ತು ದ್ವಿತೀಯ ಸ್ಥಾನವನ್ನು *ಸಾನಿಕ ಎಸ್, ಶಿವಮೊಗ್ಗ* ಕ್ರೀಡಾ ಮತ್ತು ಯುವಜನ ಇಲಾಖೆ ಶಿವಮೊಗ್ಗದ ವಿದ್ಯಾರ್ಥಿನಿ ರವರು ಪಡೆದಿರುತ್ತಾರೆ. ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ* ರವರು *ಪ್ರಥಮ ಸ್ಥಾನ* ಪಡೆದ ವಿಜೇತರಿಗೆ *ರೂ 10,000/- ನಗದು* ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರವನ್ನು ಹಾಗೂ *ದ್ವಿತೀಯ ಸ್ಥಾನ* ಪಡೆದ ವಿಜೇತರಿಗೆ *ರೂ 5,000/-* ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು ಹಾಗೂ ಮ್ಯಾರಥಾನ್ ನಲ್ಲಿ ಭಾಗವಹಿಸಿದ ಎಲ್ಲರಿಗೂ *ಪ್ರಶಂಸನಾ ಪತ್ರ* ನೀಡಲಾಯಿತು.