i
ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಹತ್ಯೆ…
ಚಂದ್ರವಳ್ಳಿ ನ್ಯೂಸ್, ಗದಗ:
ಇಲ್ಲಿನ ನಗರಸಭೆ ಅಧ್ಯಕ್ಷೆ ಸುನಂದಾ ಬಾಕಳೆ, ಅವರ ಪುತ್ರ ಸೇರಿದಂತೆ ನಾಲ್ವರನ್ನು ಹತ್ಯೆಗೈದಿರುವ ಘಟನೆ ನಗರದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ನಗರದ ಚನ್ನಮ್ಮ ವೃತ್ತದ ಸಮೀಪವಿರುವ ದಾಸರ ಓಣಿಯಲ್ಲಿ ಈ ಘಟನೆ ನಡೆದಿದ್ದು, ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಕೊಪ್ಪಳದ ಪರುಶುರಾಮ (55), ಲಕ್ಷ್ಮಿ (45) ಮತ್ತು ಆಕಾಂಕ್ಷ (17) ಹತ್ಯೆಯಾದವರು ಎಂದು ತಿಳಿದು ಬಂದಿದೆ.
ಸುನಂದ ಬಾಕಳೆ ಪುತ್ರ ಕಾರ್ತಿಕ್ ಬಾಕಳೆಯ ಮದುವೆ ನಿಶ್ಚಯ ಕಾರ್ಯಕ್ರಮದ ನಿಮಿತ್ತ ಸಂಬಂಧಿಕರು ಏ.17 ರಂದು ಮನೆಗೆ ಬಂದಿದ್ದರು. ರಾತ್ರಿ ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ಮಲಗಿದ್ದಾಗ ಹತ್ಯೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
ಕೊಪ್ಪಳದ ಭಾಗ್ಯ ನಗರದಲ್ಲಿ ಪರಶುರಾಮ ಹಾದಿಮನಿ, ಲಕ್ಷ್ಮಿ ಹಾಗೂ ಆಕಾಂಕ್ಷ ವಾಸವಾಗಿದ್ದರು. ಪರಶುರಾಮ ಅವರು ಹೋಟೆಲ್ ಉದ್ಯಮಿಯಾಗಿದ್ದು, ಎರಡು ಬಾರಿ ಭಾಗ್ಯನಗರ ಪಟ್ಟಣ ಪಂಚಾಯತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಲಕ್ಷ್ಮಿ ಒಂದು ಬಾರಿ ನಾಮನಿರ್ದೇಶಿತ ಸದಸ್ಯೆಯಾಗಿದ್ದರು.