i
ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಉರುಳಿ ಬಿದ್ದು ಸಾವು…
ಚಂದ್ರವಳ್ಳಿ ನ್ಯೂಸ್, ಉಡುಪಿ :
ಸೆಕೆಯ ಕಾರಣ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆಯೊದು ನಡೆದಿದೆ.
ಮೃತಪಟ್ಟ ಶಿಕ್ಷಕ ಅಜೆಕಾರು ಆಶ್ರಯನಗರ ನಿವಾಸಿ ಸುಂದರ ನಾಯ್ಕ್ (55) ಎಂದು ಹೇಳಲಾಗಿದೆ.
ಇವರು ರಾತ್ರಿ ವೇಳೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಆದರೆ 6.30 ರ ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಗಮನಕ್ಕೆ ಬಂದಿದೆ. ಗಾಢನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಸುಂದರ ನಾಯ್ಕ್ ಅವರು ಕಾರ್ಕಳ ತಾಲೂಕಿನ ಎಣ್ಣಹೊಳಗೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.