i
ಪಿಯು, ಪದವಿ ಪಾಸಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಪ್ರಾರಂಭ…
ಚಂದ್ರವಳ್ಳಿ ನ್ಯೂಸ್, ಶಿರಾ:
ಜಿಲ್ಲೆಯ ಶಿರಾ ತಾಲೂಕು ಚಿಕ್ಕನಹಳ್ಳಿಯಲ್ಲಿರುವ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಪ್ರಾರಂಭವಾಗಿದ್ದು, ದ್ವಿತೀಯ ಪಿ.ಯು.ಸಿ ಉತ್ತೀರ್ಣ ಮತ್ತು ಪದವಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.ಬೆಂಗಳೂರು ವಿಭಾಗದಲ್ಲಿ ಆಂಗ್ಲ ಮಾಧ್ಯಮದಲ್ಲಿ ನಡೆಯುವ ಸಂಸ್ಥೆ ಇದಾಗಿದೆ. ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶೇ. ೪೫ ಹಾಗೂ ಸಾಮಾನ್ಯ ವಿದ್ಯಾರ್ಥಿಗಳು ಶೇ. ೫೦ ಅಂಕ ಗಳಿಸಿರಬೇಕು. ಶಿಕ್ಷಕರ ತರಬೇತಿಯಲ್ಲದೆ ಈ ಸಂಸ್ಥೆಯಲ್ಲಿ ಗಣಕಯಂತ್ರ ತರಬೇತಿ, ಸ್ಮಾರ್ಟ್ ಕ್ಲಾಸ್ ಬೋಧನೆ, ಶಿಕ್ಷಕರಾಗ ಬಯಸುವವರಿಗೆ ಟಿಇಟಿ ತರಬೇತಿ ನೀಡಲಾಗುವುದು. ನುರಿತ ಅನುಭವವುಳ್ಳ ಉಪನ್ಯಾಸಕರುಗಳಿಂದ ತರಬೇತಿ ಮತ್ತು ಬೋಧನೆ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. ೯೭೪೧೦೬೯೪೧೪, ೯೯೮೦೮೭೦೨೬೦, ೭೭೬೦೭೮೩೬೫೩, ೯೮೮೦೩೩೧೦೮೩, ೯೪೮೦೨೫೦೪೮೭ಅನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲ ತಿಮ್ಮರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.