i
ವಿಜ್ಞಾನ ಶಿಕ್ಷಕ ಎಸ್.ಶಿವಕುಮಾರ್ ನಿಧನ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಕಾಟಪ್ಪನಹಟ್ಟಿಯ ವಿಜ್ಞಾನ ಶಿಕ್ಷಕ ಎಸ್.ಶಿವಕುಮಾರ್(೫೫) ರಾತ್ರಿ ತಮ್ಮ ಮನೆಯಲ್ಲಿಯೇ ಮಗಿದ್ದ ಸಂದರ್ಭದಲ್ಲಿ ಲೋಬಿಪಿಯಿಂದ ನಿಧನರಾಗಿರುತ್ತಾರೆ.
ಪ್ರಸ್ತುತ ಅವರು ಗಾಂಧಿನಗರದ ತಮ್ಮ ಸ್ವಂತ ಮನೆಯಲ್ಲಿ ವಾಸವಿದ್ದು, ತಳಕು ಹೋಬಳಿ ತಿಮ್ಮನಹಳ್ಳಿ ಗ್ರಾಮದ ಮೂಡಲಗಿರಿಯಪ್ಪ ಗ್ರಾಮೀಣ ಪ್ರೌಢಶಾಲೆಯಲ್ಲಿ ಕಳೆದ ೧೦ ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಮಹಾಲಕ್ಷ್ಮಿ, ಮೂವರು ಪತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ಧಾರೆ. ಅಂತ್ಯಕ್ರಿಯೆ ಪಾವಗಡ ರಸ್ತೆಯ ರುದ್ರಭೂಮಿಯಲ್ಲಿ ಮಂಗಳವಾರ ಸಂಜೆ ನಡೆಯಿತು.