i
ದೇವರಕೊಟ್ಟ ಏಕಲವ್ಯ ಮಾದರಿ ವಸತಿ ಶಾಲೆಗೆ ನೂರಷ್ಟು ಫಲಿತಾಂಶ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲೂಕಿನ ದೇವರಕೊಟ್ಟ ಗ್ರಾಮದಲ್ಲಿರುವ ಏಕಲವ್ಯ ಮಾದರಿ ವಸತಿ ದೇವರಕೊಟ್ಟ(ಎಸ್ಟಿ-601) ಶಾಲೆಗೆ ಶೇಕಡಾ 100 ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆಗೆ ಹಾಜರಾದ ಬಾಲಕರು: 28, ಹಾಜರಾದ ಬಾಲಕಿಯರು: 28.ಉತ್ತೀರ್ಣರಾದ ಬಾಲಕರು: 28 ಉತ್ತೀರ್ಣರಾದ ಬಾಲಕಿಯರು: 28ಒಟ್ಟು ಹಾಜರಾದವರು: 56, ಒಟ್ಟು ಉತ್ತೀರ್ಣರಾದವರು: 56ವಿದ್ಯಾರ್ಥಿವಾರು ಗ್ರೇಡ್ ವೈಸ್ ಫಲಿತಾಂಶ-A+ :11, A :16, B+ :17, B :10, C+ :2, C :0 ಶಾಲೆಯ ಗುಣಾತ್ಮಕ ಫಲಿತಾಂಶ : 90.79. ಶಾಲಾ ದರ್ಜೆ: ಎ ಆಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ವಸತಿ ಶಾಲೆಯ ವಿದ್ಯಾರ್ಥಿಗಳ ಈ ಸಾಧನೆಗೆ ಮಾರ್ಗದರ್ಶನ ನೀಡಿದ ಇಲಾಖಾ ಅಧಿಕಾರಿಗಳಿಗೆ, ಶಿಕ್ಷಕ ವೃಂದದವರಿಗೆ, ವಿದ್ಯಾರ್ಥಿಗಳಿಗೆ, ಪೋಷಕ ವರ್ಗದವರಿಗೆ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಏಕಲವ್ಯ ಮಾದರಿ ವಸತಿಯ ಪ್ರಾಂಶುಪಾಲರು ತಿಳಿಸಿದ್ದಾರೆ.