i
ಜೋಕಾಲಿ ತಂದ ಆಪತ್ತು ಕುತ್ತಿಗೆಗೆ ಸೀರೆ ಬಿಗಿದು ಬಾಲಕ ಸಾವು…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಸಾವು ಯಾವುದೇ ರೀತಿ ಸಂಭವಿಸಬಹುದು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿಗೆ. ಆದರೆ 6 ವರ್ಷದ ಬಾಲಕನೊಬ್ಬ ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದು ಸಾವು ಕಂಡಿದ್ದು ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ರಾಮದೇವರ ಬೀದಿಯ ನಿವಾಸಿ ಬಸವರಾಜ್ ಎಂಬುವವರ ಪುತ್ರ ಚಂದ್ರ(6) ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಮೃತ ದುರ್ದೈವಿ ಆಗಿದ್ದಾರೆ.
ಮನೆಯಲ್ಲಿ ಜೋಕಾಲಿಯಲ್ಲಿ ಆಟವಾಡುವ ವೇಳೆ ಆಕಸ್ಮಿಕವಾಗಿ ಘಟನೆ ನಡೆದಿದ್ದು ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.