Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರವಾಸೋದ್ಯಮ, ಆತಿಥ್ಯಕ್ಕೆ ಹೊಸ ದಿಕ್ಕು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರವಾಸೋದ್ಯಮ, ಆತಿಥ್ಯಕ್ಕೆ ಹೊಸ ದಿಕ್ಕು- FHRAI 55ನೇ ಸಮಾವೇಶ ಉದ್ಘಾಟನೆಯಾಗಿದೆ.
ʼದಿ ಫೆಡರೇಷನ್ ಆಫ್ ಹೊಟೇಲ್ & ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾʼ (FHRAI)55ನೇ ವಾರ್ಷಿಕ ಸಮಾವೇಶವನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾದ  ಹೆಚ್. ಕೆ. ಪಾಟೀಲರೊಂದಿಗೆ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಉದ್ಘಾಟಿಸಿ ಮಾತನಾಡಿದರು.

ಆತಿಥ್ಯ ವಲಯದ ಸಮಗ್ರ ಬೆಳವಣಿಗೆಗೆ ಕರ್ನಾಟಕ ಬದ್ಧವಾಗಿದ್ದು, ನಮ್ಮ ರಾಜ್ಯವನ್ನು ಅಗ್ರ ಪ್ರವಾಸೋದ್ಯಮ ಗುರಿಯನ್ನಾಗಿ ರೂಪಿಸುವ ಗುರಿ ಹೊಂದಿದೆ. ಈ ವಲಯವು  ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಕರ್ನಾಟಕದ ಜಾಗತಿಕ ಕೀರ್ತಿಗೆ ಪ್ರಮುಖ ಪ್ರೇರಕ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು.

ಫ್ಯೂಚರ್ ಸ್ಕೇಪ್-2047’ ಎಂಬ ಹೆಸರಿನಲ್ಲಿ ಆಯೋಜಿಸಲಾಗಿರುವ ಈ ಸಮಾವೇಶವು ಇಂದಿನಿಂದ ಸೆಪ್ಟೆಂಬರ್ 20ರವರೆಗೆ 3 ದಿನಗಳ ಕಾಲ ಬೆಂಗಳೂರಿನ  ಖಾಸಗಿ ಹೋಟೆಲ್ ಒಂದರಲ್ಲಿ ಆಯೋಜನೆಯಾಗಿದೆ.

#FHRAI ಭಾರತದ ಅತಿದೊಡ್ಡ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಸ್ಥೆಗಳ ಒಕ್ಕೂಟವಾಗಿದ್ದು, ದೇಶದಾದ್ಯಂತ ಹರಡಿರುವ 60,000 ಹೋಟೆಲ್ ಗಳು ಮತ್ತು 5,00,000 ರೆಸ್ಟೋರೆಂಟ್‌ಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಸಮಾವೇಶವು ಭಾರತದ ಪ್ರವಾಸೋದ್ಯಮ -ಆತಿಥ್ಯ ಕ್ಷೇತ್ರಕ್ಕೆ ನವೀನತೆ
, ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯ ಹೊಸ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST