ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ವಿದ್ಯಾನಗರದ ವಸತಿ ಪ್ರದೇಶವೊಂದರಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂದೆಯನ್ನು ಭೇದಿಸಿರುವ ಚಿತ್ರದುರ್ಗ ನಗರ ಮತ್ತು ಮಹಿಳಾ ಠಾಣೆಯ ಪೊಲೀಸರು, ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಘಟನೆಯ ವಿವರ:
ವಿದ್ಯಾನಗರದ 5ನೇ ಕ್ರಾಸ್‌ನಲ್ಲಿರುವ ತಿಮ್ಮಮ್ಮ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಹಸೀನಾಬಾನು ಮತ್ತು ಅಶ್ವಕ್ ಅಹಮದ್ ಎಂಬುವರು ಅಮಾಯಕ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಗಿರಾಕಿಗಳನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಿನಾಂಕ 18.04.2026 ರಂದು ದಾಳಿ ನಡೆಸಿದ್ದಾರೆ.
ಪೊಲೀಸ್ ಕ್ರಮ:
ಬಂಧಿತ ಆರೋಪಿಗಳಾದ ಹಸೀನಾಬಾನು ಮತ್ತು ಅಶ್ವಕ್ ಅಹಮದ್ ಇವರಿಂದ.
ಅಡ್ಡೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.


ದಾಳಿ ತಂಡ: ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್‌ಕುಮಾರ್ ಬಂಡಾರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಶಿವಕುಮಾರ ಅವರ ಮಾರ್ಗದರ್ಶನದಲ್ಲಿ, ಡಿ.ವೈ.ಎಸ್.ಪಿ ಅರುಣ್ ನಾಗೇಗೌಡ ಹಾಗೂ ಮಹಿಳಾ ಠಾಣೆಯ ಪಿ.ಐ ನಯೀಂ ಅಹಮದ್ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಪ್ರಕರಣ ದಾಖಲು:
ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಅನ್ವಯಿಕ ಕಲಂಗಳು ಹಾಗೂ Immoral Traffic Prevention Act-1956 ರ ಅಡಿಯಲ್ಲಿ ಮೊಕದ್ದಮೆ (ಮೊ.ಸಂ: 83/2026) ದಾಖಲಿಸಿಕೊಳ್ಳಲಾಗಿದೆ. ಯಶಸ್ವಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.


