ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪರ:
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಜನತಾ ದಳ (ಜಾತ್ಯಾತೀತ) ಪಕ್ಷದ ತೂಬಗೆರೆ ಹೋಬಳಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಹಾಡೋನಹಳ್ಳಿ ಮುನೇಗೌಡ ರವರನ್ನು ನೇಮಕ ಮಾಡಲಾಗಿದೆ.
ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ದೇವನಹಳ್ಳಿ ವಿಧಾನ ಸಭಾಕ್ಷೇತ್ರದ ತೂಬಗೆರೆ ಹೋಬಳಿ ಜನತಾದಳ (ಜಾತ್ಯಾತೀತ) ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ, ಬಲವರ್ಧನೆಗೊಳಿಸುವ ನಿಟ್ಟಿಲ್ಲಿ ಈ ಜವಾಬ್ದಾರಿಯನ್ನು ಮುನೇಗೌಡರಿಗೆ ವಹಿಸಲಾಗಿದೆ ಎಂದು ದೇವನಹಳ್ಳಿತಾಲ್ಲೂಕಿನ ಜಾತ್ಯಾತೀತ ದಳದ ತಾಲ್ಲೂಕು ಅಧ್ಯಕ್ಷ ಎಸ್ ಮಹೇಶ ತಿಳಿಸಿದ್ದಾರೆ.




