ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ವಿಧಾನ ಪರಿಷತ್ತಿನ ಚುನಾವಣಾ ರಣಕಣಕ್ಕೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಮೇಲ್ಮನೆಯ 7 ಸ್ಥಾನಗಳಿಗೆ ಜೂನ್ 18ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ನಾಲ್ವರು ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಕಾಂಗ್ರೆಸ್, ಇದೀಗ ಅಚ್ಚರಿಯ ನಡೆ ಎಂಬಂತೆ 5ನೇ ಅಭ್ಯರ್ಥಿಯ ಹೆಸರನ್ನೂ ಘೋಷಿಸಿದೆ.
ಬುಧವಾರವಷ್ಟೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್‌ಹಾಗೂ ಮಳವಳ್ಳಿ ಶಿವಣ್ಣ ಅವರ ಹೆಸರನ್ನು ಅಂತಿಮಗೊಳಿಸಿತ್ತು.
ಆದರೆ, ಶನಿವಾರ ಬಿಡುಗಡೆಯಾಗಿರುವ ದಿಢೀರ್ ಪಟ್ಟಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿನಯ್ ಕಾರ್ತಿಕ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಇದರೊಂದಿಗೆ ಕೈ ಪಡೆಯಲ್ಲಿ ಒಟ್ಟು ಅಭ್ಯರ್ಥಿಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಬಲಾಬಲದ ಲೆಕ್ಕಾಚಾರ ಮತ್ತು ಹೊಸ ಕುತೂಹಲ ಸದ್ಯದ ಸಂಖ್ಯಾಬಲದ ಆಧಾರದ ಮೇಲೆ ನೋಡುವುದಾದರೆ, ವಿಧಾನ ಸಭೆಯಲ್ಲಿ 136 ಶಾಸಕರನ್ನು ಹೊಂದಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತಲಾ 4 ಸ್ಥಾನಗಳನ್ನು ಅತ್ಯಂತ ಸುಲಭವಾಗಿ ಗೆಲ್ಲಬಹುದಾಗಿದೆ. ಇತ್ತ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಕೂಡ ಇಬ್ಬರು ಅಭ್ಯರ್ಥಿಗಳನ್ನು ಯಾವುದೇ ಆತಂಕವಿಲ್ಲದೆ ಮೇಲ್ಮನೆಗೆ ಕಳುಹಿಸಬಹುದಾದ ಬಲ ಹೊಂದಿದೆ.
ಪಕ್ಷ ಶಾಸಕರ ಬಲ ಸುಲಭವಾಗಿ ಗೆಲ್ಲಬಹುದಾದ ಸ್ಥಾನಗಳು-
ಕಣಕ್ಕಿಳಿಸಿರುವ ಅಭ್ಯರ್ಥಿಗಳುಕಾಂಗ್ರೆಸ್-5 ಬಿಜೆಪಿ-ಜೆಡಿಎಸ್ಮೈತ್ರಿ ಬಲ-02 ಹೀಗಿದ್ದೂ, 7 ಸ್ಥಾನಗಳ ಪೈಕಿ ಕಾಂಗ್ರೆಸ್ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದು ವಿರೋಧ ಪಕ್ಷಗಳ ಮತಗಳನ್ನು ಸೆಳೆಯುವ ತಂತ್ರವೇ ಅಥವಾ ಆಂತರಿಕ ಲೆಕ್ಕಾಚಾರವೇ ಎಂಬ ಚರ್ಚೆಗಳು ಈಗ ರಾಜಕೀಯ ವಲಯದಲ್ಲಿ ಜೋರಾಗಿವೆ.
ಟ್ವಿಸ್ಟ್ ಕೊಟ್ಟ ಕೈ ನಾಯಕರು: ಕೇವಲ 4 ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ, ಸಿಎಂ ಆಪ್ತ ವಿನಯ್ ಕಾರ್ತಿಕ್ ಅವರನ್ನು 5ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮೇಲ್ಮನೆ ಚುನಾವಣೆಯನ್ನು ಮತ್ತಷ್ಟು ರೋಚಕಗೊಳಿಸಿದೆ.



