Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

3,039 ಫಲಾನುಭವಿಗಳಿಗೆ ಹೈನುರಾಸು ನೆರವು – ಆಕ್ಷೇಪಣೆಗೆ ಸೆ. 15 ಕೊನೆಯ ದಿನ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಗಣಿಬಾಧಿತ ಹಾಗೂ ಪ್ರಭಾವಕ್ಕೊಳಗಾದ ಪ್ರದೇಶಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಹೈನುರಾಸು ನೀಡುವ ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸೆಪ್ಟೆಂಬರ್ 15 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳ 39 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ GPLF ಸದಸ್ಯತ್ವ ಪಡೆದಿರುವ ಸ್ವಸಹಾಯ ಗುಂಪಿನ ಒಟ್ಟು 3,179 ಮಹಿಳಾ ಫಲಾನುಭವಿಗಳಿಗೆ ಹೈನುರಾಸು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

2026ರ ಮೇ 22ರಂದು ಹೊರಡಿಸಲಾದ ಪತ್ರಿಕಾ ಪ್ರಕಟಣೆ ಆಧರಿಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ 3,039 ಅರ್ಹ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ಸಮಿತಿಯು 2026ರ ಆಗಸ್ಟ್ 28ರಂದು ನಿಯಮಾನುಸಾರ ಆಯ್ಕೆ ಮಾಡಿದೆ.

ತಾಲೂಕುವಾರು ವಿವರ ಇಂತಿದೆ. ಚಿತ್ರದುರ್ಗ ತಾಲೂಕಿನಲ್ಲಿ 1,364 (ಪ.ಜಾತಿ 406, ಪ.ಪಂ 256, ಸಾಮಾನ್ಯ 702), ಹೊಳಲ್ಕೆರೆ ತಾಲೂಕಿನಲ್ಲಿ 598 (ಪ.ಜಾತಿ 103, ಪ.ಪಂ 43, ಸಾಮಾನ್ಯ 452) ಹಾಗೂ

 ಹೊಸದುರ್ಗ ತಾಲೂಕಿನಲ್ಲಿ 1,077 (ಪ.ಜಾತಿ 145, ಪ.ಪಂ 81, ಸಾಮಾನ್ಯ 851) ಸೇರಿದಂತೆ ಒಟ್ಟು 3,039 ಫಲಾನುಭವಿಗಳು ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ತಾಲೂಕಿನ ಆಳಗವಾಡಿ, ಆಲಘಟ್ಟ, ಬೊಮ್ಮೆನಹಳ್ಳಿ, ಅನ್ನೇಹಾಳ್, ಭೀಮಸಮುದ್ರ, ಗೊಡಬನಾಳು, ಸೊಂಡೆಕೋಳ, ಸಿರಿಗೆರೆ, ಹಿರೇಗುಂಟನೂರು,  ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು, ಆಡನೂರು, ಉಪ್ಪರಿಗೇನಹಳ್ಳಿ, ಗುಂಜಿಗನೂರು, ಚಿತ್ರಹಳ್ಳಿ, ಟಿ. ನುಲೇನೂರು, ತಾಳ್ಯ, ತೇಕಲವಟ್ಟಿ, ಬಿ. ದುರ್ಗ, ಮುತ್ತಗದೂರು, ಶಿವಗಂಗಾ, ಹಿರೇಎಮ್ಮಿಗನೂರು, ಹೆಚ್. ಡಿ. ಪುರ ಹಾಗೂ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ, ದೊಡ್ಡಕಿಟ್ಟದಹಳ್ಳಿ, ಮಾಡದಕೆರೆ, ಅತ್ತಿಮಗ್ಗೆ, ಜಾನಕಲ್, ಚಿಕ್ಕಬ್ಯಾಲದಕೆರೆ, ಕಂಚಿಪುರ, ಗುಡ್ಡದನೇರಲಕೆರೆ, ದೊಡ್ಡತೇಕಲವಟ್ಟಿ, ಕೈನಡು, ಹೆಗ್ಗೆರೆ, ಎಸ್. ನೇರಲಕೆರೆ, ಶ್ರೀರಾಂಪುರ, ಕಾರೇಹಳ್ಳಿ, ಮತ್ತೋಡು, ದೊಡ್ಡಘಟ್ಟ ಮತ್ತು ಹುಣವಿನಡು ಗ್ರಾಮಗಳು ಈ ಯೋಜನೆಗೆ ಒಳಪಟ್ಟಿವೆ.

ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ, ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳ ನೋಟೀಸ್ ಬೋರ್ಡ್ ಹಾಗೂ ಜಿಲ್ಲೆಯ ವೆಬ್ಸೈ ಟ್ https://chitradurga.nic.in ನಲ್ಲಿ ಪ್ರಕಟಿಸಲಾಗಿದೆ.

 ಈ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸೂಕ್ತ ಸಕಾರಣದೊಂದಿಗೆ ಇದೇ ಸೆಪ್ಟೆಂಬರ್ 15 ರೊಳಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಥವಾ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ಸಲ್ಲಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್‌ಬಿಎನ್‌ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ: ಗುರುವಂದನೆ ಸಲ್ಲಿಕೆನನ್ನ ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಚಿತ್ರದುರ್ಗದ ಪಾಲಿಗೆ ‘ಭಾಗೀರಥಿ’ಯಾದ ಭದ್ರಾ ಮೇಲ್ದಂಡೆ: ಪ್ರಾಯೋಗಿಕ ನೀರು ಹರಿವಿಗೆ ಅಧಿಕೃತ ಚಾಲನೆ!ಚಿನ್ನದ ಗಣಿ ಮಣ್ಣಿನಿಂದ ಕನ್ನಡದ ಮಡಿಲಿಗೆ—ಡಾ.ಮಮತಾ ದಾಳಿಂಬೆ ಬೆಳೆ ರೋಗ ನಿರ್ವಹಣೆಗೆ ಜೈವಿಕ ಶಿಲೀಂಧ್ರನಾಶಕ ಬಳಸಿ: ಡಾ. ಗುರುದೇವಿ ವಿ. ನವಲಿಭಾರತವೆಂದರೆ ಶ್ರೀರಾಮ ಮತ್ತು ಶ್ರೀ ಕೃಷ್ಣ ಅವತಾರದ ದಿವ್ಯ ಸಂದೇಶಗಳ ಭಂಡಾರವೇ ಆಗಿದೆ ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ತರುವ ಸಾಮರ್ಥ್ಯವಿದೆ: ಬಿಜೆಪಿಗೆ ಡಿ.ಕೆ. ಶಿವಕುಮಾರ್ ತಿರುಗೇಟು  ಭೀಮನಬಂಡೆ ಯಾಜ್ಞವಲ್ಕ್ಯ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಹಿರಿಯೂರು ಮತ್ತು ಚಳ್ಳಕೆರೆ ನಗರಸಭೆಗಳಿಗೂ ಪ್ರತ್ಯೇಕ 'ನಗರ ಯೋಜನಾ ಪ್ರಾಧಿಕಾರ' ರಚನೆಯಾಗಲಿ 3,039 ಫಲಾನುಭವಿಗಳಿಗೆ ಹೈನುರಾಸು ನೆರವು – ಆಕ್ಷೇಪಣೆಗೆ ಸೆ. 15 ಕೊನೆಯ ದಿನ