ಚಂದ್ರವಳ್ಳಿ ನ್ಯೂಸ್, ಬಿಜಾಪುರ:
ಎಲ್ಲಾ ನನ್ನ ಶಿಕ್ಷಕರು ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.. ಶಿಕ್ಷಕರು ಜೀವನದ ಮೊದಲ ದಾರಿ ತೋರಿಸುವವರು, ಅವರು ಕೇವಲ ಅಕ್ಷರಗಳನ್ನು ಕಲಿಸುವುದಿಲ್ಲ, ಮೌಲ್ಯಗಳುನ್ನು ಜ್ಞಾನವನ್ನು ಹಂಚುವರು,
ಬದುಕಿನ ಅರ್ಥವನ್ನು ತಿಳಿಸುವವರು, ಅವರ ಸಹನೆ ಪರ್ವತದಷ್ಟು ದೃಢ, ಅವರ ಜ್ಞಾನ ಸಮುದ್ರದಷ್ಟು ಆಳ, ಪ್ರತಿ ಸಂದೇಹಕ್ಕೆ ಸ್ಪಷ್ಟತೆಯ ನೀಡುವರು, ಶಾಂತಿಯಲ್ಲಿ ಮಾರ್ಗದರ್ಶನ ಮಾಡುವವರು.
ಅವರು ಬಿತ್ತುವ ಜ್ಞಾನ ಬೀಜಗಳು ಬೆಳೆದು ಮರವಾಗುತ್ತವೆ, ನಮ್ಮ ಭವಿಷ್ಯದ ಅಡಿಪಾಯಹಾಕುತ್ತಾರೆ, ಅವರ ಮಾರ್ಗದರ್ಶನದಲ್ಲಿ ಸಮಾಜ ಬೆಳೆಯುತ್ತಿದೆ, ಗುರುವಿನ ಶಕ್ತಿ ಶಾಶ್ವತವಾಗಿ ಇರಲಿ, ಯಾವುದೇ ವೃತ್ತಿಗೂ ಗುರುವಿನ ಅಗತ್ಯ ಬಹಳ ಮುಖ್ಯ, ಪ್ರತಿಯೊಬ್ಬ ವಿದ್ಯಾರ್ಥಿಗೂ ದಾರಿ ತೋರಿಸುವವರು, ಶಿಕ್ಷಕರಲ್ಲದೆ ಪ್ರಗತಿ ಅಸಾಧ್ಯ, ಶಿಕ್ಷಕರಿಲ್ಲದೆ ಬೆಳಕು ಅಸ್ಪಷ್ಟ, ಪ್ರತಿಯೊಬ್ಬ ಶಿಕ್ಷಕರಿಗೆ ಗೌರವ ಸಲ್ಲಿಸಿ, ಪ್ರತಿಯೊಬ್ಬ ಶಿಕ್ಷಕರಿಗೆ ಕೃತಜ್ಞತೆ ಇರಲಿ, ಪ್ರತಿಯೊಬ್ಬ ಶಿಕ್ಷಕರು ಶ್ರೇಷ್ಠವಾಗಿ ನಿಲ್ಲಲಿ, ಶಿಕ್ಷಕರ ದಿನವು ಸದಾ ನೆನಪಾಗಿ ಉಳಿಯಲಿ.
ತಾಯಿ ಇಲ್ಲದೆ ಜಗತ್ತು ಇಲ್ಲ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಇಲ್ಲ..
ಲೇಖನ : ಅಮೃತಾ ಸಿದ್ದಪಾ ಚೌಧರಿ, ವಿಜಯಪುರ.




