ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭೀಮನಬಂಡೆಯ ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಗೈದು, ಹಲವು ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಕೂಟದ ಪ್ರಮುಖ ಫಲಿತಾಂಶಗಳು: ತಂಡದ ಕ್ರೀಡೆಗಳು: ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ ಪಡೆದರೆ; ಬಾಲಕರ ಬಾಲ್ ಬ್ಯಾಡ್ಮಿಂಟನ್, ಬಾಲಕಿಯರ ಖೋ-ಖೋ ಹಾಗೂ ಫುಟ್ಬಾಲ್ ಪಂದ್ಯಾಟಗಳಲ್ಲಿ ದ್ವಿತೀಯ ಸ್ಥಾನ ಗಳಿಸಿದರು.
ಅಥ್ಲೆಟಿಕ್ಸ್ (ಪ್ರಥಮ ಸ್ಥಾನ): 100ಮೀ ಮತ್ತು 200ಮೀ ಓಟದಲ್ಲಿ ಪವನ್ ಕುಮಾರ್ ವಿ. ಪ್ರಥಮ ಸ್ಥಾನ ಗಳಿಸಿ ಮಿಂಚಿದರು.
ಅಥ್ಲೆಟಿಕ್ಸ್ (ದ್ವಿತೀಯ ಸ್ಥಾನ): 4x100ಮೀ ರಿಲೇಯಲ್ಲಿ ಸುಮಂತ್ ಮನೋಹರ್, ಪ್ರಣವ್, ಪವನ್ ಮತ್ತು ಪ್ರೀತಮ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಜೊತೆಗೆ 3000ಮೀ ಓಟದಲ್ಲಿ ಕಲ್ಪನಾ, 100ಮೀ ಓಟದಲ್ಲಿ ಸುಮಂತ್ ಮನೋಹರ್, ಗುಡ್ಡಗಾಡು ಓಟದಲ್ಲಿ ಕಲ್ಪನಾ, ತಿಮ್ಮರಾಜು, ದಿಶಾ, ಯಶವಂತ್, ಯಶಸ್ವಿನಿ ಪೂಜಾರಿ ಹಾಗೂ 100ಮೀ ಹರ್ಡ್ಲ್ಸ್ ಮತ್ತು ಚಕ್ರ ಎಸೆತದಲ್ಲಿ ಸುಮಂತ್ ಮನೋಹರ್ ದ್ವಿತೀಯ ಸ್ಥಾನ ಪಡೆದರು.
ತೃತೀಯ ಸ್ಥಾನ: 800ಮೀ ಓಟದಲ್ಲಿ ತಿಮ್ಮರಾಜು ಹಾಗೂ 100ಮೀ ಮತ್ತು 200ಮೀ ಓಟದಲ್ಲಿ ಅರ್ಚಿತ ತೃತೀಯ ಸ್ಥಾನ ಪಡೆದರು.
ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ಸುರೇಶ್ ಅವರು ಬಹುಮಾನ ವಿತರಿಸಿ ಗೌರವಿಸಿದರು.
ಸಾಧನೆಗೈದ ವಿದ್ಯಾರ್ಥಿಗಳಿಗೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಸುರೇಶ್, ವೀರಭದ್ರ, ಹರ್ಷ ಹಾಗೂ ಕ್ರೀಡಾ ಸಂಯೋಜಕರಾದ ಅಭಿಷೇಕ್ ಅವರಿಗೆ ಸಂಸ್ಥೆಯ ಆಡಳಿತಾಧಿಕಾರಿ ಶ್ರೀನಿವಾಸಮೂರ್ತಿ ಅವರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದರು.




