ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ :
ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ರವರ 135 ನೇ ಜಯಂತಿ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿ ನೆಲಗೇತನಹಟ್ಟಿ ಗ್ರಾಮಶಾಖೆಯ ಅಂಬೇಡ್ಕರ್ ಕಾಲೋನಿಯಲ್ಲಿ ಆಯೋಜಿಸಲಾಗಿತ್ತು,ಬೆಳ್ಳಿ ರಥದಲ್ಲಿ ಅಂಬೇಡ್ಕರ್ ರವರ ಭಾವಚಿತ್ರವನ್ನಿರಿಸಿ ಊರಿನ ಪ್ರಮುಖ ರಸ್ತೆಗಳಲ್ಲಿ ಕೋಲಾಟ.
ವಿವಿಧ ಕಲಾತಂಡಗಳು, ಕಲಾ ಮೇಳಗಳ ಮೂಲಕ ಭವ್ಯ ಮೆರವಣಿಗೆಯು ಸಂಭ್ರಮದ ಮೆರುಗಿನಿಂದ ತುಂಬಿತ್ತು,ಎಲ್ಲೆಲ್ಲೂ ನೀಲಿ ಬಾವುಟಗಳು ರಾರಾಜಿಸುತ್ತಿದ್ದವು,ನೋಡುಗರ ಕಣ್ಣಿಗೆ ಕಣ್ಮನ ಸೆಳೆಯುವಂತಿತ್ತು, ವಿಶ್ವ ಜ್ಞಾನಿ ಅಂಬೇಡ್ಕರ್ ವೇದಿಕೆಯಲ್ಲಿ ಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯಮಾನ್ಯರು ಹಾಗೂ ಅಧ್ಯಕ್ಷರು,ಸದಸ್ಯರು ಹಿರಿಯ ಮುಖಂಡರು ವಿಶೇಷವಾದ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ ಬಿ ನಾಗರಾಜ್, ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯು ಕೇವಲ ಒಂದು ಧರ್ಮ ಜಾತಿಗೆ ಮೀಸಲಾಗಬಾರದು ಬಾಬಾ ಸಾಹೇಬರು ಕೇವಲ ಒಂದು ಜಾತಿಗೆ ಧರ್ಮಕ್ಕೆ ಶ್ರಮಿಸಿಲ್ಲ ಅವರು ಇಡೀ ಭಾರತ ದೇಶದ ಸರ್ವಧರ್ಮ ಜನಾಂಗದ ಶೋಷಿತರಿಗೆ ದೇಶದ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ಹಕ್ಕು ಅಧಿಕಾರಕ್ಕಾಗಿ ಶಿಕ್ಷಣಕ್ಕಾಗಿ ರಾಜಕೀಯಕ್ಕಾಗಿ ಜೀವನಪೂರ್ತಿ ಹೋರಾಟವನ್ನು ಮಾಡಿದ್ದಾರೆ ಇವರ ಈ ಹೋರಾಟದ ಪ್ರತಿಫಲವಾಗಿ ಇಂದು ನಾವೆಲ್ಲರೂ ಸಂವಿಧಾನದ ಋಣದಲ್ಲಿದ್ದೇವೆ ಎಂದು ವಿಶ್ವ ಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೇದಿಕೆಯನ್ನು ಉದ್ದೇಶಿಸಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದಲಿತ ಮುಖಂಡ ಕೆ ಬಿ ನಾಗರಾಜ್ ರವರು ಮಾತನಾಡಿದರು.
ಅಂದಿನ ಕಾಲಮಾನದ ಅಂಬೇಡ್ಕರ್ ವಿರೋಧಿಗಳು ಅವರ ಬರಹಗಳ ಪುಸ್ತಕಗಳನ್ನು ಬೆಂಕಿ ನಿಂದ ಸುಟ್ಟಿರುತ್ತಾರೆ ಅದರಲ್ಲಿ ಅಳಿದು ಉಳಿದ ಪುಸ್ತಕಗಳನ್ನು ಇಂದು ನಾವೆಲ್ಲರೂ ಓದುತ್ತಿದ್ದೇವೆ.
ಅವರು ಚಿಕ್ಕ ವಯಸ್ಸಿನಲ್ಲಿ ಅಸ್ಪೃಶ್ಯತೆಯನ್ನ ಅವಮಾನವನ್ನ ಅನುಭವಿಸಿ ಇಂತಹ ಅನಿಷ್ಟ ಪದ್ದತಿಯನ್ನು ಮುಂದೆ ಯಾರು ಅನುಭವಿಸಬಾರದು ಎಂಬ ಉದ್ದೇಶಕ್ಕಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಓದಿ ದೇಶ ವಿದೇಶಗಳಲ್ಲಿ ಪದವಿಗಳನ್ನು ಪಡೆದು ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದು ನಮ್ಮ ದೇಶದ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಈ ಸಂವಿಧಾನದ ಅಡಿಯಲ್ಲಿ ರಾಜಪ್ರಭುತ್ವವನ್ನು ನಿರ್ಬಂಧಿಸಿ ಪ್ರಜಾಪ್ರಭುತ್ವವನ್ನು ಜಾರಿಗೆ ತಂದಿದ್ದಾರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರವನ್ನು ನೀಡಿದ್ದಾರೆ ಈ ರಾಜಕೀಯ ಅಧಿಕಾರವನ್ನು ಪ್ರತಿಯೊಬ್ಬ ಪ್ರಜೆಯ ಮತದಿಂದ ನಿರ್ಮಾಣ ಮಾಡಲಾಗುತ್ತದೆ ಅದಕ್ಕಾಗಿ ನಿಮ್ಮ ಮತವನ್ನು ಮತ್ತು ನಿಮ್ಮ ಮನೆಯ ಮಗಳನ್ನು ಯೋಗ್ಯರಿಗೆ ನೀಡಿ ಎಂದು ಕೆಪಿಸಿಸಿ ಕಾರ್ಯದರ್ಶಿ ಡಾ. ತಿಪ್ಪೇಸ್ವಾಮಿ (ಜೆ ಜೆ ಹಟ್ಟಿ ) ರವರು ತಿಳಿಸಿದರು.
ಇತ್ತೀಚಿನ ದಿನದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಕಲಿ ಅಭಿಮಾನಿಗಳು ಹೆಚ್ಚುತ್ತಿದ್ದಾರೆ ಆದರೆ ಕಡಿಮೆ ಸಂಖ್ಯೆಯಲ್ಲಿ ಅಸಲಿ ಅಂಬೇಡ್ಕರ್ ವಾದಿಗಳು ಇದ್ದಾರೆ, ಈ ನಕಲಿ ಮತ್ತು ಅಸಲಿ ಅಂಬೇಡ್ಕರ್ ವಾದಿಗಳಿಗೆ ವ್ಯತ್ಯಾಸವೇನೆಂದರೆ ಅಸಲಿ ಅಂಬೇಡ್ಕರ್ ವಾದಿಗಳು ಅಂಬೇಡ್ಕರ್ ಅವರ ಅವರ ಸಿದ್ಧಾಂತಗಳನ್ನು ಆದರ್ಶಗಳನ್ನ ಪಾಲಿಸುತ್ತಾರೆ ಅವರ ಅನುಯಾಯಿಗಳು ಮತ್ತು ಅಭಿಮಾನಿಗಳಾಗಿರುತ್ತಾರೆ.
ನಕಲಿ ಅಂಬೇಡ್ಕರ್ ವಾದಿಗಳು ಅಂಬೇಡ್ಕರ್ ರವರ ಕಾರ್ಯಕ್ರಮಗಳಲ್ಲಿ ಜಯಂತಿಗಳಲ್ಲಿ ಅವರ ಭಾವಚಿತ್ರವಿರುವ ಉಡುಪುಗಳನ್ನು ಧರಿಸಿ ನೀಲಿ ಬಣ್ಣದ ಝಂಡವನ್ನು ಹಿಡಿದು ಜೈ ಭೀಮ್ ಎಂಬುವ ಘೋಷಣೆಯನ್ನು ಕೂಗಿ ಕುಪ್ಪಳಿಸಿ ಕುಣಿಯುತ್ತಾರೆ. ಕಾರ್ಯಕ್ರಮ ಮುಗಿದ ನಂತರ ಅಂಬೇಡ್ಕರ್ರವರ ವಿರೋಧಿಗಳಾದ ಮನುವಾದಿಗಳು ಮತ್ತು ಗಾಂಧಿ ವಾದಿಗಳ ಜೊತೆ ಕೈಜೋಡಿಸಿ ಅಂಬೇಡ್ಕರ್ ವಾದಕ್ಕೆ ಸೋಲುಂಟು ಮಾಡುತ್ತಾರೆ ಇಂತಹ ನಕಲಿ ಅಂಬೇಡ್ಕರ್ ವಾದಿಗಳಿಂದ ದೂರವಿರುವುದು ಉತ್ತಮ ನಕಲಿ ಅಂಬೇಡ್ಕರ್ ವಾದಿಗಳಿಂದ ಅಂಬೇಡ್ಕರ್ ರವರ ಕನಸುನ್ನ ನನಸು ಮಾಡುವುದು ಅಸಾಧ್ಯ
ಆದ ಕಾರಣ ವಿದ್ಯಾವಂತ ಪ್ರಜ್ಞಾವಂತ ಯುವಕರೇ ಮತ್ತು ಯುವತಿಯರೇ ತಾವೆಲ್ಲರೂ ಅಂಬೇಡ್ಕರ್ ವಾದಕೆ ಅವರ ತತ್ವ ಸಿದ್ಧಾಂತಗಳಿಗೆ ಜಯವಾಗಲಿ ಎನ್ನುವ ನಿಟ್ಟಿನಲ್ಲಿ ಹೆಜ್ಜೆ ಹಾಕೋಣ ಅವರ ಕನಸನ್ನ ನನಸು ಮಾಡೋಣ ಎಂದು ಡಾ.ಬಿ ಆರ್ ಅಂಬೇಡ್ಕರ್ ವಾದಿ ಪತ್ರಕರ್ತ ಬಿಟಿ ಶಿವಕುಮಾರ್ ಮಾತನಾಡಿದರು.
ದೇವರು ಎಂಬ ಮೌಢ್ಯ ಮದ್ಯ ಎಂಬ ದುಶ್ಚಟಗಳಿಂದ ಮತ್ತು ಮನುವಾದಿಗಳ ಮೂಢನಂಬಿಕೆಗಳನ್ನು ಯುವ ಜನತೆ ಕೈಬಿಡಬೇಕು ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು ಅತಿ ಹೆಚ್ಚು ಮಹಿಳೆಯರು ಬಾಬಾ ಸಾಹೇಬರನ್ನ ದೇವರ ಸಮಾನವಾಗಿ ನೋಡಬೇಕು ಎಂದು ದಲಿತ ಮುಖಂಡ ಟಿ ಬಸವರಾಜ್ ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಮತ್ತು ಆಶಯಗಳನ್ನು ತಾವೆಲ್ಲರೂ ಅಳವಡಿಸಿಕೊಳ್ಳಬೇಕು ಮತ್ತು ಯುವ ಪೀಳಿಗೆ ಅತಿ ಉತ್ತಮವಾದ ಉನ್ನತವಾದ ಶಿಕ್ಷಣವನ್ನು ಪಡೆದು ಅಧಿಕಾರವನ್ನು ಹಿಡಿಯಬೇಕು ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಯ್ಯ ಮಾತನಾಡಿದರು.
ಲಿಡ್ಕರ್ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಓ ಶಂಕರ್, ಚಿತ್ರದುರ್ಗ ಜಿಲ್ಲಾ ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹೊನ್ನೂರ್ ಸ್ವಾಮಿ, ಜಿಲ್ಲಾ ಬಿಜೆಪಿ ಸಮಿತಿಯ ಕಾರ್ಯದರ್ಶಿ ಮೋಹನ್ ನಾಯಕನಹಟ್ಟಿ, ಮಂಡಲ ಅಧ್ಯಕ್ಷ ಚೆನ್ನಗನಹಳ್ಳಿ ಮಲ್ಲೇಶ್, ಅಬ್ಬೇನಹಳ್ಳಿ ನಾಗರಾಜ್ ಮತ್ತಿತರರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಟಿ ಎಂ ಪೂರ್ಣ ಒಬ್ಬಯ್ಯ ಕೆಪಿಸಿಸಿ ಕಾರ್ಯದರ್ಶಿ ಡಾ. ಜೆಜೆ ಹಟ್ಟಿ ತಿಪ್ಪೇಸ್ವಾಮಿ. ಲಿಡ್ಕರ್ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಓ ಶಂಕರ್. ಭಾರತೀಯ ಜನತಾ ಪಕ್ಷದ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್. ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಚನ್ನಗನಹಳ್ಳಿ ಮಲ್ಲೇಶ್. ಮಾದಿಗ ದಂಡೋರ ಚಿತ್ರದುರ್ಗ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ. ಡಿಎಸ್ಎಸ್ ನ ತಾಲೂಕು ಸಂಘಟನಾ ಸಂಚಾಲಕ ಹೊನ್ನೂರ್ ಸ್ವಾಮಿ. ಓಬಳೇಶ. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಡಿ ಚೌಡಪ್ಪ. ದಲಿತ ಮುಖಂಡರಾದ ಟಿ ಬಸವರಾಜ್. ಯತ್ನಟ್ಟಿ ಓಬಳೇಶ್. ತಿಪ್ಪೇಸ್ವಾಮಿ. ದ್ಯಾವರನಹಳ್ಳಿ ಸುರೇಶ್. ನೆಲಗೆತನಟ್ಟಿ ಗ್ರಾಮದ ಹಿರಿಯರಾದ ತಿಮ್ಮಣ್ಣ ತಿಪ್ಪೇಸ್ವಾಮಿ ಬಾಲೇನಹಳ್ಳಿ ಗೌಡ ಬೋರಣ್ಣ. ಡಿಎಸ್ಎಸ್ ನ ಸಂಚಾಲಕ ಪರಶುರಾಂಪುರ ಪಾಲಾಕ್ಷಪ್ಪ. ದಾಸಯ್ಯ. ಯಜಮಾನ ಕಾಳೆ ಕ್ಯಾಸಯ್ಯ. ಸಣ್ಣ ಬೋರಮ್ಮ. ಪೂಜಾರಿ ಓಬಳೇಶ್. ಜೈ ಭೀಮ್ ಬಾಯ್ಸ್ ಗ್ರೂಪ್ . ಹಾಗೂ ಗ್ರಾಮಸ್ಥರು ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಲಗೇತನಹಟ್ಟಿ ಗ್ರಾಮ ಶಾಖೆಯ ಪದಾಧಿಕಾರಿಗಳು, ಜೈ ಭೀಮ್ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಜೈ ಭೀಮ್ ರಾತ್ರಿ ಪಾಠಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರುಗು ತಂದರು.


