ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಸಲು ಹೋಬಳಿ ಉಜ್ಜಿನಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಹಾಲುಮತಸ್ಥ ಕುಲದೇವರಾದ ಉಜ್ಜನಿ ಶ್ರೀಬೀರಲಿಂಗೇಶ್ವರಸ್ವಾಮಿ ದೇವರ ವಾರ್ಷಿಕೋತ್ಸವ ನಡೆಯಿತು.
ಉಜ್ಜನಿ ಬೀರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಾಯಲದಲ್ಲಿ ಜು.10 ರಂದು ಸಂಜೆ ಕಳಸ ಸ್ಥಾಪನೆ, ಗಂಗೆ ಪೂಜೆ ಜು.11 ಮುಂಜಾನೆ 5.30 ರಿಂದ 6.30ರ ವರೆಗೆ ಅಭಿಷೇಕ ಹಾಗೂ ಬೆಳಿಗ್ಗೆ 9-30 ರಿಂದ 10-00 ಗಂಟೆಯವರೆಗೆ ಪುಣ್ಯಾಹ ಮಧ್ಯಾಹ್ನ 12-00 ಗಂಟೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ದೂರದ ಊರುಗಳಿಂದ ಬಂದ ಕುಲ ಭಾಂದವರು:
ಮುಡಿ ಮತ್ತು ಹರಕೆ ಸಲ್ಲಿಸಿದರು.ವೀರಗಾರರು ದೇವರುಗಳಿಗೆ ಪೂಜಾ ಕೈಂಕರ್ಯಗಳೊಂದಿಗೆ ಭಾಗಿಯಾಗಿ ಧನ್ಯತೆ ಮೆರೆದರು.
ದೇವರ ದರ್ಶನಕ್ಕೆ ಬಂದ ಕುಲ ಭಾಂದವರು ಹಾಗು ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಅನ್ನ ಸಂತರ್ಪಣೆ ಏರ್ಪಾಡು ಮಾಡಲಾಗಿತ್ತು.
ಜು.11ರಾತ್ರಿ ಬೀರೆದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಉಜ್ಜನಿಯ ಸುತ್ತ ಮುತ್ತಲಿನ ಗ್ರಾಮಗಳಾದ ಏಕಾರ್ಲಹಳ್ಳಿ, ಕುಕ್ಕಲಹಳ್ಳಿ, ಉಜ್ಜನಿ ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಯಿತು.
“ಹಾಲುಮತ (ಕುರುಬ) ಪುರಾಣವು ಕರ್ನಾಟಕದ ಕುರುಬ ಸಮುದಾಯದ ಶ್ರೀಮಂತ ಮೌಖಿಕ ಪರಂಪರೆ, ಸಾಂಸ್ಕೃತಿಕ ಇತಿಹಾಸ ಮತ್ತು ದೈವಿಕ ನಂಬಿಕೆಗಳನ್ನು ಒಳಗೊಂಡಿದೆ. ಬೀರಪ್ಪ ಮತ್ತು ಲಕ್ಷ್ಮಮ್ಮ ಜಾತ್ರೆಯನ್ನು ವರ್ಷಕ್ಕೆ ಒಂದು ಸಾರಿ ಜಾತ್ರೆ ಮಾಡಲಾಗುತ್ತೆ.ಹಾಗು ಏಳು ವರ್ಷಕ್ಕೊಮ್ಮೆ ನಡೆಯುವ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಮಕ್ಕಳಿಗೆ ಮುಡಿ ಕೂಡುವುದು ಕರ್ಣಭೂಷಣ (ಕಿವಿ ಚುಚ್ಚುವ) ಕಾರ್ಯಕ್ರಮವು ಮಾಡಲಾಗುವುದು”.
ಸಿದ್ದ ಗಂಗಯ್ಯ, ಗೌರವಾಧ್ಯಕ್ಷರು, ಶ್ರೀ ಉಜ್ಜನಿ ಬೀರಲಿಂಗೇಶ್ವರ ಅಭಿವೃದ್ದಿ ಮಂಡಲಿ.


