Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿವೈಎಸ್ಪಿ ನಂದಾರೆಡ್ಡಿ ದಿಢೀರ್ ವರ್ಗಾವಣೆ

Advertisement
ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಈವರೆಗೆ ನಗರ ಡಿವೈಎಸ್ಪಿಯಾಗಿದ್ದ ಚಂದ್ರಕಾಂತ್ ನಂದರೆಡ್ಡಿ ಅವರು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಸಿಸಿಬಿಯಲ್ಲಿದ್ದ ಗೋವಿಂದರಾಜು ವಿ. ಅವರು ನಂದರೆಡ್ಡಿ ಅವರ ಸ್ಥಾನಕ್ಕೆ ಬರಲಿದ್ದಾರೆ.


ನಗರದಲ್ಲಿ  ಕಳೆದ ಜ.1 ರಂದು ನಡೆದಿದ್ದ ಬ್ಯಾನರ್ ಗಲಾಟೆ ಮತ್ತು ಫೈರಿಂಗ್ ಪ್ರಕರಣ ನಿಭಾಯಿಸಲು ನಂದಾರೆಡ್ಡಿ ಅವರು ವಿಫಲವಾಗಿದ್ದಾರೆಂದು ಬಿಜೆಪಿಯ ಮುಖಂಡರು ಆರೋಪ ಮಾಡಿದ್ದಲ್ಲದೆ, ಅವರ ವರ್ಗಾವಣೆ ಮಾಡಲು ಆಗ್ರಹಿಸಿದ್ದರು.

ಬಿಜೆಪಿಯ ಬೇಡಿಕೆ ಹಿನ್ನಲೆಯಲ್ಲಿ. ಸರ್ಕಾರ  ಜ.27 ರಂದು ನಂದರೆಡ್ಡಿಯವರನ್ನು ಸ್ಥಳ ತೋರಿಸದೆ ಇವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮ ಅವರನ್ನು ನೇಮಕ ಮಾಡಿತ್ತು.

ಆದರೆ ಬ್ಯಾನರ್ ಗಲಾಟೆಯ ಆರೋಪದಿಂದ ವರ್ಗಾವಣೆ ಆಗಲು ಒಪ್ಪದೆ ತಮ್ಮದೇ ಪ್ರಭಾವ ಬಳಿಸಿ. ನಗರ ಡಿವೈಎಸ್ಪಿ ಯಾಗಿ ನಿಯೋಜಿತಗೊಂಡು ನಗರಕ್ಕೆ ಆಗಮಿಸಿ, ಡಿವೈಎಸ್ಪಿ ಕಚೇರಿಯಲ್ಲಿ ಕುಳಿತು, ಅಧಿಕಾರ ಸ್ವೀಕರಿಸಲು ಆಗದೇ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮ ವಾಪಸ್ ಹೋಗುವಂತೆ ಮಾಡಿದ್ದರು.

ನಂತರ ಅವರೇ ಸರ್ಕಾರಕ್ಕೆ ಪತ್ರಬರೆದು ಸಾಮಾನ್ಯ ವರ್ಗಾವಣೆ ಮಾಡಿದರೆ ನನ್ನ ಅಭ್ಯಂತರ ಇಲ್ಲ ಎಂದಿದ್ದರಂತೆ. ಈಗ ರಾಜ್ಯದ 23 ಜನ ಡಿವೈಎಸ್ಪಿಗಳ ವರ್ಗಾವಣೆಯಲ್ಲಿ ಇವರು ಒಬ್ಬರಾಗಿದ್ದು ಅಲ್ಲದೆ ಬೆಂಗಳೂರಿಗೆ ವರ್ಗಗೊಂಡಿದ್ದಾರೆ.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST