Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರಿಗೆ ನೌಕರರಿಗೆ ಸಂಬಳ ಕಟ್ಟು; ರಸಗೊಬ್ಬರ ಕೇಳಿದ ರೈತರಿಗೆ ಲಾಟಿ ಏಟು!

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಷ್ಕರ ಮಾಡಿದ ಸಾರಿಗೆ ನೌಕರರಿಗೆ ಸಂಬಳ ಕಟ್ಟು; ರಸಗೊಬ್ಬರ ಕೇಳಿದ ರೈತರಿಗೆ ಲಾಟಿ ಏಟು! ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.


ಲಾಟರಿ ಸಿಎಂ ಸಿದ್ದರಾಮಯ್ಯ ನವರೇ, ನಮ್ಮದು ಕಾರ್ಮಿಕರ ಪರವಾದ ಸರ್ಕಾರ, ರೈತರ ಪರವಾದ ಸರ್ಕಾರ ಎಂದು ಬೊಗಳೆ ಬಿಡುತ್ತಿರಲ್ಲ, ಇದೇನಾ ಕಾರ್ಮಿಕರನ್ನು, ರೈತರನ್ನು ನಿಮ್ಮ ಕರ್ನಾಟಕ ಕಾಂಗ್ರೆಸ್ ನಡೆಸಿಕೊಳ್ಳುವ ಪರಿ?

ನಿಮ್ಮ 'ನ್ಯಾಯ ಯೋಧ' ರಾಹುಲ್ ಗಾಂಧಿ ಅವರು ಕಂಡುಕಂಡಲ್ಲೆಲ್ಲ ಪ್ರದರ್ಶನ ಮಾಡುವ ಸಂವಿಧಾನದಲ್ಲಿ ಸಾರಿಗೆ ನೌಕರರಿಗೆ ಮುಷ್ಕರ ಮಾಡುವ ಹಕ್ಕಿಲ್ಲವಾ? ನಿಮ್ಮ ರಾಹುಲ್ ಗಾಂಧಿ ಅವರು ಪ್ರದರ್ಶನ ಮಾಡುವ ಸಂವಿಧಾನದಲ್ಲಿ ರೈತರಿಗೆ ರಸಗೊಬ್ಬರ ಕೇಳುವ ಹಕ್ಕು ಇಲ್ಲವಾ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಸಿದ್ದರಾಮಯ್ಯನವರೇ. ಈ ಹಿಟ್ಲರ್ ಧೋರಣೆ ಬಿಡಿ. ನಿಮ್ಮ ಕೈಲಾದರೆ ಕಾರ್ಮಿಕರು, ರೈತರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಿ. ನಿಮ್ಮ ಕೈಯಲ್ಲಿ ಆಗುವುದಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST