ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಕಾರಿನಲ್ಲೇ ಮಹಿಳೆಯೊಬ್ಬರು ಸುಟ್ಟು ಭಸ್ಮವಾಗಿರುವ ಘಟನೆ ಇಂದು ಮಧ್ಯಾಹ್ನ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಜಿಂಕೆಬಚ್ಚಹಳ್ಳಿ ಬಯಲು ಪ್ರದೇಶದಲ್ಲಿ ಘಟನೆಯೊಂದು ನಡೆದಿದೆ.
ಮಹಿಳೆ ಸಾವು ಆಕಸ್ಮಿಕವೋ, ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿದು ಬಂದಿರುವುದಿಲ್ಲ. ಈ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಸದ್ಯ ಮೃತ ಮಹಿಳೆಯ ಹೆಸರು, ವಿಳಾಸ, ವಯಸ್ಸು ತಿಳಿದು ಬಂದಿಲ್ಲ.
ಟಯೋಟಾ ಗ್ಲಾಂಜಾ ಕಾರಿನ ಮಾಲೀಕ ಮಾರಸಂದ್ರ ಸುರೇಶ್ ಎಂದು ತಿಳಿದುಬಂದಿದೆ ಕಾರಿನ ಮಾಲೀಕನ ಬಳಿ ಇಂದು ಬೆಳಗ್ಗೆ ಆಸ್ಪತ್ರೆಗೆ ಹೋಗಬೇಕೆಂದು ರಾಮಾಂಜಿನಿ ಎಂಬ ವ್ಯಕ್ತಿ ಕಾರು ಪಡೆದು ಕೊಂಡಿರುತ್ತಾನೆ. ನಂತರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಾಮಾಂಜಿನಿ ಶರ್ಟ್ ಕಳಚಿ ಮೊಬೈಲ್ ಬಿಸಾಡಿ ಎಸ್ಕೆಪ್ ಆಗಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸ್ಥಳದಲ್ಲಿ ಮೊಬೈಲ್, ಶರ್ಟ್ ಪತ್ತೆಯಾಗಿದೆ. ಮಹಿಳೆ ಮಾಂಗಲ್ಯ ಸರ ಕೂಡ ಪತ್ತೆಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಪ್ರಾರಂಭಿಸಿದ್ದಾರೆ.


