ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಸಿರಿ ಸಮೃದ್ಧಿ ಮಹಿಳಾ ಸಂಘ ವತಿಯಿಂದ ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮ ದಲ್ಲಿ ಸಂಘದ ಸಂಸ್ಥಾಪಕಿ ಮುನಿರತ್ನ ಮಾತನಾಡಿ, “ಕಾರ್ಮಿಕರೆಂದರೆ ಕೇವಲ ಕಂಪನಿಗಳಲ್ಲಿ ಕೆಲಸ ಮಾಡುವವರಷ್ಟೇ ಅಲ್ಲ. ಮನೆ ಕೆಲಸ ನಿರ್ವಹಿಸುವವರು, ಸ್ವಯಂ ಉದ್ಯೋಗ ಮಾಡಿಕೊಂಡು ಹೋಟೆಲ್ ನಡೆಸುವವರು, ಹಪ್ಪಳ–ಉಪ್ಪಿನಕಾಯಿ ತಯಾರಿಸುವವರು ಸೇರಿದಂತೆ ಪ್ರತಿಯೊಬ್ಬರೂ ಕಾರ್ಮಿಕರೆ ಇವರ ಪರಿಶ್ರಮವನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಇಂತಹ ಸನ್ಮಾನವು ಅವರಿಗೆ ಆತ್ಮತೃಪ್ತಿ ಮತ್ತು ಪ್ರೇರಣೆಯನ್ನು ನೀಡುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಸನ್ಮಾನಿಸುವುದರೊಂದಿಗೆ ಅವರ ಪರಿಶ್ರಮದ ಮಹತ್ವವನ್ನು ಹಿರಿದಾಗಿ ಪ್ರತಿಪಾದಿಸಿತು.
ಈ ಸಂದರ್ಭದಲ್ಲಿ ಸಿರಿ ಸಮೃದ್ಧಿ ಮಹಿಳಾ ಸಂಘ ಪದಾಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.


