ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವತಿಯಿಂದ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿಯೊಂದನ್ನು ಹೊರಡಿಸಲಾಗಿದೆ.
ಅಂತಿಮ ದಿನಾಂಕ: ಗೃಹಜ್ಯೋತಿ ಮರುಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಗ್ರಾಹಕರು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅಕ್ಟೋಬರ್ 31, 2026 ರವರೆಗೆ ಕೊನೆಯ ಅವಕಾಶ ನೀಡಲಾಗಿದೆ.
ದಾಖಲೆ ಸಲ್ಲಿಸಬೇಕಾದ ಸ್ಥಳ: ಮರುಸಮೀಕ್ಷೆಯಲ್ಲಿ ಭಾಗವಹಿಸಲು ಬಾಕಿ ಉಳಿದಿರುವ ಫಲಾನುಭವಿಗಳು ಬೆಸ್ಕಾಂ ವಿಭಾಗ ಹಿರಿಯೂರು, ಇದಕ್ಕೆ ಒಳಪಡುವ ಉಪ ವಿಭಾಗಗಳ ಕಚೇರಿಯ ಕಂದಾಯ ಶಾಖೆಗೆ ಖುದ್ದಾಗಿ ಭೇಟಿ ನೀಡಿ ದಾಖಲೆಗಳನ್ನು ಸಲ್ಲಿಸಬೇಕು.
ಹಿರಿಯೂರು ವಿಭಾಗದ ಅಂಕಿ-ಅಂಶಗಳು:
ಒಟ್ಟು ವಿದ್ಯುತ್ ಗ್ರಾಹಕರು: 1,57,918
ದಾಖಲೆ ಸಲ್ಲಿಸಿದವರು: 1,54,525
ಬೀಗ ಹಾಕಿದ ಅಥವಾ ಖಾಲಿ ಮನೆಗಳು: 316
ಬಿಜೆ-ಕೆಜೆ ಮನೆಗಳು: 1577
ದಾಖಲೆ ಸಲ್ಲಿಸಬೇಕಿರುವ ಬಾಕಿ ಸ್ಥಾವರಗಳು-1500
ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಮುಂದುವರಿಸಲು ಈ ಅಂತಿಮಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಿರಿಯೂರು ವಿಭಾಗದ ಬೆಸ್ಕಾಂ ಅಧಿಕಾರಿಗಳಾದ ಕಾರ್ಯನಿರ್ವಾಹಕರ ಅಭಿಯಂತರ ಅಶೋಕ್ ಹೆಂಡಗಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎನ್.ಎಸ್ ರಾಜು ಅವರುಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.




