ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಐತಿಹಾಸಿಕ ಶ್ರೀಮಂತಿಕೆ, ಪರಂಪರೆ ಹಾಗೂ ವೈಭವವನ್ನು ಅನಾವರಣಗೊಳಿಸುವಂತಹ ಮಹತ್ವದ ಕೃತಿಗಳು ಇನ್ನಷ್ಟು ಹೊರಬರಲಿ. ಆ ಮೂಲಕ ನಮ್ಮ ನೈಜ ಇತಿಹಾಸದ ಅರಿವು ಮುಂದಿನ ಪೀಳಿಗೆಗೂ ತಲುಪುವಂತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.
ನಗರದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಸಂಗಮೇಶ ಬಾದವಾಡಗಿ ಅವರು ರಚಿಸಿರುವ "ಜೋಳ ರಾಜನ ಕಥೆ" ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಸಾಗರ ಖಂಡ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಗಾಂಧಿ ಭವನದ ಅಧ್ಯಕ್ಷ ವೂಡೆ ಪಿ. ಕೃಷ್ಣ, ಸಂಗಮೇಶ ಬಾದವಾಡಗಿ ಗೆಳೆಯರ ಬಳಗದ ಪ್ರೊ. ಹಿರೇಮಠ, ಭತ್ತದ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.




