Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಕ್ತಿ ಮತ್ತು ಭಕ್ತಿಯ ಸಂಕೇತ ಹನುಮಂತ

Advertisement

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ :
ಶಕ್ತಿ ಮತ್ತು ಭಕ್ತಿಯ ಸಂಕೇತ ಹನುಮಂತ. ಶ್ರೀರಾಮ ಹಾಗೂ ಹನುಮಂತರ ಪ್ರಾರ್ಥನೆಯಿಂದ ಆನಂದ ಉಂಟಾಗುವುದು.ರಾಮನಾಮ ಇದ್ದಡೇ ಹನುಮಂತನು ನೆಲೆಸುವನು ಎಂಬ ನಂಬಿಕೆ ಭಾರತೀಯ ಸನಾತನ ಧರ್ಮದಲ್ಲಿ ಇದೆ ಎಂದು ಋಗ್ವೇದಿ ಯೂತ್ ಕ್ಲಬ್  ಅಧ್ಯಕ್ಷರು ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಶರಣ್ಯ ಎಸ್ ಋಗ್ವೇದಿ ತಿಳಿಸಿದರು.

 ಅವರು ಶಂಕರಪುರ ಶ್ರೀರಾಮ ಮಂದಿರದಲ್ಲಿ ಶನಿವಾರದ ವಿಶೇಷ ಚಿಂತನ ಕಾರ್ಯಕ್ರಮದಲ್ಲಿಶ್ರೀ ಹನುಮಂತನ ಕುರಿತು ಮಾತನಾಡುತ್ತಾ  ಹನುಮಂತನ ಶಕ್ತಿ ಭಕ್ತಿ ಮತ್ತು ಬುದ್ಧಿವಂತಿಕೆ ಅಪಾರ ಶ್ರೀ ರಾಮನ ಪರಮ ಭಕ್ತರಾದ ಹನುಮಂತನು ಶಕ್ತಿ ಪುರುಷ. ಪವನ ಪುತ್ರ ವಾಯುಪುತ್ರ ಆಂಜನೇಯ ಹನುಮಂತ ಹಲವು ಹೆಸರುಗಳಿಂದ ಕರೆಯಲ್ಪಡುವ ಹನುಮಂತನ ಪಾತ್ರ ಅಪಾರವಾದದ್ದು. ಪ್ರತಿ ಗ್ರಾಮಗಳಲ್ಲೂ ಹನುಮಂತನ ಗುಡಿಗಳು, ದೇವಸ್ಥಾನಗಳು ವಿಶೇಷವಾಗಿ ಪ್ರತಿಷ್ಠಾಪಿಸಲ್ಪಟ್ಟಿದೆ. ರಾಮನ ಪರಮ ಭಕ್ತನಾದ ಹನುಮಂತನು ರಾಮಾಯಣದಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದವನು. ರಾಮನ ಆಲಿಂಗನವನ್ನು ಪಡೆದಂತಹ ಹನುಮಂತ ನಿಜವಾದ ಭಕ್ತ.

ಪ್ರತಿಯೊಬ್ಬರು ರಾಮ ನಾಮವನ್ನು ಜಪಿಸುವ ಮೂಲಕ ಶಾಂತಿ, ನೆಮ್ಮದಿಯನ್ನು ಪಡೆಯಬಹುದು. ರಾಮಾಯಣದಲ್ಲಿ ರಾಮನಿಗೆ ಸರ್ವ ರೀತಿಯಲ್ಲಿ ವಿವಿಧ ಹಂತಗಳಲ್ಲಿ ತನ್ನ ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಮೂಲಕ ಹನುಮಂತ ಭಾರತೀಯರ ಶಕ್ತಿ ಪುರುಷರಾಗಿ ಇದ್ದಾರೆ. ಪ್ರತಿ ರಾಮೋತ್ಸವದಲ್ಲೂ ಹನುಮಂತೋತ್ಸವ ಎಲ್ಲಾ ಕಡೆ ನಡೆಸುವ ಮೂಲಕ ರಾಮನಿಗೆ ನೀಡುವ ಗೌರವ ಮತ್ತು ಶ್ರದ್ಧೆಯನ್ನು ಹನುಮಂತನಿಗೆ ನೀಡುತ್ತಾರೆ ಎಂದು ತಿಳಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಮಂದಿರದ ಅಧ್ಯಕ್ಷ ಪ್ರತಾಪ್ ರವರು ವಹಿಸಿಕೊಂಡಿದ್ದರು. ಪ್ರತಿ ಶನಿವಾರ ಭಾರತೀಯ ಧರ್ಮದ ಪ್ರತಿಯೊಬ್ಬ ದೇವರುಗಳ ಹಾಗೂ ಸಂಸ್ಕೃತಿ ಪರಂಪರೆಯ ಬಗ್ಗೆ ಚಿಂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಪ್ರತಿಯೊಬ್ಬರಿಗೂ ತಿಳಿಯುವ ಅವಕಾಶ ಹಾಗೂ ಭಾಗವಹಿಸುವ ಇಚ್ಛೆಯನ್ನು ಪ್ರತಿಯೊಬ್ಬರು ಹೊಂದಬೇಕು ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಸುರೇಶ್ ಎನ್ ಋಗ್ವೇದಿ, ಸುದರ್ಶನ್ ಹಾಗೂ ಶ್ರೀ ರಾಮ ಮಂದಿರದ ಭಕ್ತರು ಇದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST