Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕನ್ನಡ ಚಿತ್ರರಂಗದ ದಿಕ್ಸೂಚಿ, ವಿಶ್ವ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ - ಸುರೇಶ್ ಎನ್. ಋಗ್ವೇದಿ

ಚಂದ್ರವಳ್ಳಿ ನ್ಯೂಸ್, ​ಚಾಮರಾಜನಗರ: 
"ಕನ್ನಡ ಚಿತ್ರರಂಗದ ನಿರ್ದೇಶಕ ಸ್ಥಾನಕ್ಕೆ ವಿಶ್ವಖ್ಯಾತಿ ತಂದುಕೊಟ್ಟವರು ಪುಟ್ಟಣ್ಣ ಕಣಗಾಲ್. ಇವರ ಚಿಂತನೆ
, ದೂರದೃಷ್ಟಿ, ಸೃಜನಶೀಲತೆ ಹಾಗೂ ಹೊಸ ರೂಪದ ಯೋಚನೆಗಳು ಇವರನ್ನು ವಿಶ್ವ ಶ್ರೇಷ್ಠ ನಿರ್ದೇಶಕರನ್ನಾಗಿ ಮಾಡಿವೆ. ಇವರ ಸಾಧನೆಯಿಂದ ಕನ್ನಡಿಗರು ಹೆಮ್ಮೆಪಡುವಂತಾಗಿದೆ" ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಕೊಡುಗೆಗಳು' ಕುರಿತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳಾ ಪ್ರಾಧಾನ್ಯತೆ ಹಾಗೂ ಸಾಹಿತ್ಯಕ್ಕೆ ಒತ್ತು-
ಮುಂದುವರಿದು ಮಾತನಾಡಿದ ಸುರೇಶ್ ಎನ್. ಋಗ್ವೇದಿ
, "ಪುಟ್ಟಣ್ಣ ಕಣಗಾಲ್ ಅವರು ಕಾದಂಬರಿ ಆಧಾರಿತ ಚಿತ್ರಗಳನ್ನು ತಮ್ಮದೇ ಆದ ವಿಶೇಷ ಶೈಲಿಯಲ್ಲಿ ನಿರ್ದೇಶಿಸಿದವರು. ಇವರ ಚಿತ್ರಗಳಲ್ಲಿ ಕಲೆ, ಸಾಹಿತ್ಯ, ಭಾವನಾತ್ಮಕತೆ, ಮಾನವೀಯ ಸಂಬಂಧಗಳು, ಸಾಮಾಜಿಕ ಕಾಳಜಿ ಹಾಗೂ ಆಳವಾದ ಮಹಿಳಾ ಪ್ರಾಧಾನ್ಯತೆ ಎದ್ದು ಕಾಣುತ್ತಿತ್ತು. ಇವರ ನಿರ್ದೇಶನದ ಬೆಳ್ಳಿಮೋಡ, ಗೆಜ್ಜೆಪೂಜೆ, ನಾಗರಹಾವು, ಶರಪಂಜರ, ಶುಭಮಂಗಳ, ಸಾಕ್ಷಾತ್ಕಾರ, ಅಮೃತಘಳಿಗೆ ಹಾಗೂ ಮಸಣದ ಹೂವು ಚಿತ್ರಗಳು ವಿಶ್ವಖ್ಯಾತಿ ತಂದುಕೊಟ್ಟವು. ಕನ್ನಡದಲ್ಲಿ 24 ಚಿತ್ರಗಳ ಜೊತೆಗೆ ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ಚಿತ್ರ ನಿರ್ದೇಶಿಸಿ ಪ್ರಸಿದ್ಧರಾಗಿದ್ದರು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ ಜನಿಸಿದ ಪುಟ್ಟಣ್ಣನವರ ಸ್ಮಾರಕ ನಿರ್ಮಿಸಲು ಮುಂದಾಗಿರುವ ಸರ್ಕಾರಕ್ಕೆ ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸುತ್ತೇನೆ" ಎಂದರು. 

ಚಿತ್ರರಂಗದ ದಿಗ್ಗಜರನ್ನು ಪರಿಚಯಿಸಿದ ಶಿಲ್ಪಿ-
ಕನ್ನಡ ಚಿತ್ರರಂಗಕ್ಕೆ ಅಪಾರ ನಟರನ್ನು ನೀಡಿದ ಕೀರ್ತಿ ಪುಟ್ಟಣ್ಣನವರಿಗೆ ಸಲ್ಲುತ್ತದೆ. ವಿಷ್ಣುವರ್ಧನ್
, ಅಂಬರೀಷ್, ಶ್ರೀನಾಥ್, ರಾಮಕೃಷ್ಣ, ಶ್ರೀಧರ್, ಜೈಜಗದೀಶ್ ಹಾಗೂ ಕಲ್ಪನಾ, ಆರತಿ, ಪದ್ಮಾವಾಸಂತಿ, ಅಪರ್ಣ ಮುಂತಾದ ನಟ-ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿ, ಅವರಿಂದ ಶ್ರೇಷ್ಠ ಮಟ್ಟದ ನಟನೆಯನ್ನು ಹೊರತಂದ ಮಹಾನ್ ಶಿಲ್ಪಿ ಇವರು ಎಂದು ಸ್ಮರಿಸಿದರು.

ಚಾಮರಾಜನಗರಕ್ಕೂ ಪುಟ್ಟಣ್ಣ ಚಿತ್ರಕ್ಕೂ ಇತ್ತು ನಂಟು!-
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಎಲ್. ಸುರೇಶ್ ಮಾತನಾಡಿ
, "ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪ್ರಸಿದ್ಧ 'ಸಾಕ್ಷಾತ್ಕಾರ' ಚಿತ್ರವನ್ನು ನಿರ್ಮಾಣ ಮಾಡಿದ ಕೃಷ್ಣ ಚಿತ್ರಮಂದಿರದ ಮಾಲೀಕರಾಗಿದ್ದ ಮಲ್ಲಿಕ್ ರವರು ಚಾಮರಾಜನಗರದವರು ಎಂಬುದು ನಮಗೆ ಅತ್ಯಂತ ಸಂತೋಷದ ವಿಷಯ" ಎಂದರು. ಅಲ್ಲದೆ, ರಂಗನಾಯಕಿ, ಮಸಣದ ಹೂವು, ಶರಪಂಜರ, ಎಡಕಲ್ಲು ಗುಡ್ಡದ ಮೇಲೆ ಚಿತ್ರಗಳು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದಿವೆ. ತಾಲೂಕು ಕಸಾಪವು ಇಂತಹ ಶ್ರೇಷ್ಠ ಸಾಧಕರನ್ನು ಪರಿಚಯಿಸುವ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಗೀತ ಗಾಯನ ಹಾಗೂ ಸಾಂಸ್ಕೃತಿಕ ನೆನಪು-
ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿ.ಕೆ. ಆರಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ
, ಪುಟ್ಟಣ್ಣ ಕಣಗಾಲ್ ಅವರ ಜೀವನ, ಸಾಧನೆ ಮತ್ತು ಅವರಿಗೆ ಸಂದ ಪ್ರಶಸ್ತಿ-ಗೌರವಗಳ ಕುರಿತು ಪರಿಚಯ ಮಾಡಿಕೊಟ್ಟರು. ಮತ್ತೊಬ್ಬ ನಿರ್ದೇಶಕರಾದ ಎಲ್. ಶಿವಲಿಂಗಮೂರ್ತಿ ಅವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪ್ರಸಿದ್ಧ ಚಿತ್ರಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.

ಈ ಗಣನೀಯ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖರಾದ ಸರಸ್ವತಿ, ಉಮೇಶ್, ರಾಜೇಶ್, ಹನುಮಂತ ನಾಯಕ, ಮಂಜುನಾಥ್, ವೆಂಕಟೇಶ್, ರಘು ಸೇರಿದಂತೆ ಹಲವು ಕಸಾಪ ಪದಾಧಿಕಾರಿಗಳು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!