E-PAPER
12 Nov 2026, 08:36:45 PM|
Gold₹14084/gGold24K ₹14,084/g - 22K ₹12,899/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮಗಳನ್ನಾಗಲಿ ಮತವನ್ನಾಗಲಿ ಅಯೋಗ್ಯರಿಗೆ ಕೊಡಬಾರದು

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪ್ರಜಾಪ್ರಭುತ್ವದಲ್ಲಿ ಸಂವಿಧಾನಾತ್ಮಕವಾದ ಆಡಳಿತ ಕಾಣೆಯಾಗಿ ಪ್ರಜೆಗಳ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ತಕ್ಕ ಪರಿಹಾರ ನೀಡುವಲ್ಲಿ ಸರ್ಕಾರ ಮತ್ತು ರಾಜಕಾರಣಿಗಳು ವಿಫಲರಾಗುತ್ತಿರುವುದು ಸಾಮಾನ್ಯದ ಸಂಗತಿ. ಮಗಳನ್ನಾಗಲಿ ಮತವನ್ನಾಗಲಿ ಅಯೋಗ್ಯರಿಗೆ ಕೊಡಬಾರದು ಎಂದು ಖ್ಯಾತ ಸಾಹಿತಿ ಬೀಚಿಯವರು ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಿ ಪ್ರಸ್ತುತ 2026ರ ಮುಂಗಾರು ಹಂಗಾಮದಲ್ಲಿ ಕರ್ನಾಟಕದ ಸುಮಾರು 170ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಕಾಲಕಾಲಕ್ಕೆ ಸರಿಯಾಗಿ ಬಾರದ ಮಳೆ, ಮಳೆ ಕೊರತೆಯಿಂದ ಫಲವತ್ತಾದ ಭೂಮಿಯು ಬರಡು ಭೂಮಿಯಾಗಿ ಮಾರ್ಪಾಡಾಗುತ್ತಿದೆ. ಖಾಸಗಿ ಕಂಪನಿಗಳಲ್ಲಿನ ಕೆಲಸದ ಒತ್ತಡ, ಸೇವಾ ಭದ್ರತೆ ಇಲ್ಲದಿರುವುದು, ಯಾಂತ್ರಿಕದ ಜೀವನ. ಇಂತಹ ಪರಿಸ್ಥಿತಿಯಲ್ಲಿ ಪದವಿ ಸ್ನಾತಕೋತ್ತರ ಪದವಿಗಳನ್ನು ಪಡೆದ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಎಂದು ಹೊಲ, ಮನೆ, ಗದ್ದೆ, ತೋಟಗಳ ಕೆಲಸ ತೊರೆದು, ತಂದೆ ತಾಯಿ,  ಹೆಂಡತಿ ಮಕ್ಕಳಿಂದ ದೂರವಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದಿನ ಬಳಕೆಯ ಹಾಲಿನ ದರ, ಸಕ್ಕರೆಯ ಬೆಲೆ, ಸಾರಿಗೆಯ ಬೆಲೆ, ತರಕಾರಿಗಳ ಬೆಲೆ, ಹೀಗೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯ ನಡುವೆ ಪಟ್ಟಣ ಸೇರಿ ಊಟ, ತಿಂಡಿ, ಬಾಡಿಗೆ ರೂಮು ಹೀಗೆಲ್ಲಾ ಹಗಲಿರುಳು ಸತತ ಹಲವಾರು ತಿಂಗಳು ವರ್ಷಗಳಿಂದ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ, ಇದಕ್ಕೆ ಕಾರಣವೊಂದೇ ಸರ್ಕಾರಿ ಉದ್ಯೋಗ ಪಡೆಯುವ ಹಂಬಲದಿಂದ.  ವಯೋ ನಿವೃತ್ತಿ ಹೊಂದಿದ ಸಾವಿರಾರು ಖಾಲಿ ಹುದ್ದೆಗಳನ್ನು ಸರ್ಕಾರ ಕೂಡಲೇ ನೇಮಕಾತಿ ಮಾಡದೆ, ಯುವ ಜನತೆಯ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ.

ವಿಜಯಪುರದ ಇಂಡಿ ತಾಲೂಕಿನ ನನ್ನ ಸ್ನೇಹಿತ ಹೇಳುತ್ತಾರೆ 2010 ರಲ್ಲಿ B.Ed ಮುಗಿಸಿದ್ದೇನೆ. ಸುಮಾರು 4 ವರ್ಷಗಳ ಕಾಲ CET ತರಬೇತಿಗೆ ಸೇರಿ ಓದಿದ್ದೇನೆ, ಯಾವುದೇ ನೇಮಕಾತಿಗೆ ಅರ್ಜಿ ಕರೆಯದೆ ಇಲ್ಲದೆ ಇರುವದರಿಂದ ಮರಳಿ ಮನೆಗೆ ಹೋಗಿ ರೈತನಾಗಿ, ಶಿಕ್ಷಕನಾಗಿ, ಕೂಲಿ ಕಾರ್ಮಿಕನಾಗಿ ದುಡಿದಿದ್ದೇನೆ. ರೈತನಾಗಿ ದುಡಿಯಲು ಹೆಮ್ಮೆ ಇದೆ ಆದರೆ ಇಂಡಿ ಬರದನಾಡು, ನೀರು ಇದ್ದರೆ ಕರೆಂಟ್ ಇರಲ್ಲ, ಕರೆಂಟ್ ಇದ್ದರೆ ನೀರು ಇರಲ್ಲ, ಜೀವನವೇ ಬೇಸರವಾದಾಗ ನನ್ನ ತಾಯಿ ಮುಂದೆ ಕಣ್ಣೀರು ಹಾಕಿದ್ದೇನೆ. ಕುರಿ ಸಾಕಾಣಿಕೆ ಮಾಡಿದ್ದೇನೆ, ಅದರಲ್ಲಿಯೂ ಸುಖ ಸಿಗಲಿಲ್ಲ. ಈಗ ಮತ್ತೆ ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆದಿದ್ದಾರೆ ಎಂದು ಓದಲು ವಿಜಯಪುರಕ್ಕೆ ಬಂದಿದ್ದೇನೆ, ಓದಲು ಕುಳಿತರೆ ಚಿಕ್ಕ ಮಕ್ಕಳು ನೆನಪಾಗ್ತಾರೆ, ಏನು ಮಾಡೋದು ದೇವರು ಚಿಕ್ಕ ಹೃದಯದಲ್ಲಿ ಬೆಟ್ಟದಷ್ಟು ಪ್ರೀತಿ ಇಟ್ಟಿದ್ದಾನೆ. ಅಪ್ಪಾ ಯಾವಾಗ ಬರ್ತಿಯಾ ಅಂತ ಕರೆ ಮಾಡ್ತಾರೆ, ಅಪ್ಪಾ ಏನಾದರೂ ತಿನ್ನೋಕೆ ತೆಗೆದುಕೊಂಡು ಬಾ ಅಂತಾ ಕೇಳ್ತಾರೆ, ಆದರೆ ನನ್ನ ಜೇಬಲ್ಲಿ ಹಣ ಇರಲ್ಲ, ರೂಮಿನ ಬಾಡಿಗೆ, ಮೆಸ್ಸಿನ ಬಿಲ್ಲು, ಬೆಳಿಗ್ಗೆ ನಾಸ್ಟಾ ಇವೆಲ್ಲ ಸೇರಿ ತುಂಬಾ ಖರ್ಚಾಗುತ್ತವೆ. 40ರ ವಯಸ್ಸಿನಲ್ಲಿ, ತಂದೆ-ತಾಯಿ ಹತ್ತಿರ ಹಣ ಕೇಳಲು ಮುಜುಗರವಾಗುತ್ತದೆ. ಆದರೂ ಮನಸ್ಸು ಗಟ್ಟಿಮಾಡಿ ಓದುತ್ತಿದ್ದೇನೆ, "ದೇವರಂತ ತಂದೆ-ತಾಯಿ, ಅಣ್ಣ-ತಮ್ಮಂದಿರ ಸಹಾಯ ನನ್ನ ಜೀವನ ಇರುವರೆಗೂ ಮರೆಯಲು ಸಾಧ್ಯವಿಲ್ಲ". ಇದು ನನ್ನ ಜೀವನದ ಶಿಕ್ಷಕನಾಗುವ ಕೊನೆಯ ಪ್ರಯತ್ನವಾಗಿದೆ. ಆದರೆ ಶಿಕ್ಷಕ, ಇಲ್ಲವಾದರೆ ರೈತ ಎಂದು ತಮ್ಮ ವಾಸ್ತವದ ಪರಿಸ್ಥಿತಿಯನ್ನು ತಿಳಿಸಿದರು.

ಈ ರೀತಿಯ ಸಮಸ್ಯೆಗಳು ಕೇವಲ ನಮ್ಮ ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶಾದ್ಯಂತ ವ್ಯಾಪಿಸಿದೆ.

ಆದರೆ ಇತ್ತೀಚಿನ ದಿನ ಪತ್ರಿಕೆಗಳಲ್ಲಿ ಪ್ರತಿದಿನ ಮುಖಪುಟಗಳಲ್ಲಿಯೇ ವರದಿಯಾಗುತ್ತಿರುವ ವಿಷಯ ಅದು ನೇಮಕಾತಿಯಲ್ಲಿನ ಅಕ್ರಮ. ಕೆಪಿಎಸ್ಸಿ ನೇಮಕಾತಿಯಲ್ಲಿ ಅಕ್ರಮ, ಪಿಎಸ್ಐ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ವಿಶ್ವವಿದ್ಯಾಲಯಗಳಲ್ಲಿ ಅಕ್ರಮ, ಶಿಕ್ಷಕರ ನೇಮಕಾತಿ ಪಟ್ಟಿ ರದ್ದು, ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಳಲ್ಲಿ ಪರೀಕ್ಷೆಗಳಲ್ಲಿ ಅಕ್ರಮ, ನಕಲಿ ಪಿ.ಎಚ್.ಡಿ, ನಕಲಿ ಅಂಕಪಟ್ಟಿಗಳು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪಶು ವೈದ್ಯಾಧಿಕಾರಿಗಳ ನೇಮಕಾತಿಗಳಲ್ಲಿ ಅಕ್ರಮ, ನಕಲಿ ದಾಖಲೆಗಳು, ಹೀಗೆ ಸಾಲು ಸಾಲು ಅಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಈ ರೀತಿಯ ಅಕ್ರಮದ ಸಮಸ್ಯೆಗಳು ಕೇವಲ ನಮ್ಮ ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶಾದ್ಯಂತ ವ್ಯಾಪಿಸಿದೆ.

ಕೆಲವು ವರ್ಷಗಳಿಂದ ಹತ್ತನೇ ತರಗತಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾತ್ರ ಸಿಸಿ ಕ್ಯಾಮೆರಾ ಅಡಿಯಲ್ಲಿ, ವೆಬ್ ಕಾಸ್ಟಿಂಗ್ ಅಡಿಯಲ್ಲಿ ನಡೆಯುತ್ತಾ ಬಂದಿವೆ. ಮಧ್ಯವಾರ್ಷಿಕ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನೇ ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿ ಕಟ್ಟು ನಿಟ್ಟಿನಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಲಾಖೆಯ ನಿಯಮಾನುಸಾರವಾಗಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ನೀಡುತ್ತಿರುವಾಗ, ಈ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಅನಿವಾರ್ಯನಾ..? ಉನ್ನತ ಶಿಕ್ಷಣ ಪಡೆದು ನೇಮಕಾತಿಯಲ್ಲಿ ಅಕ್ರಮವಿಲ್ಲದೆ ನೈಜತೆಯಿಂದ ಉದ್ಯೋಗ ಗಿಟ್ಟಿಸಿಕೊಳ್ಳಲು ಎಷ್ಟೋ ಅಭ್ಯರ್ಥಿಗಳು ತಪಸ್ಸಿನಂತೆ ಕುಳಿತು ತಯಾರಿ ನಡೆಸುತ್ತಿರುವಾಗ ಈ ರೀತಿಯ ಅಕ್ರಮಗಳು ಅಭ್ಯರ್ಥಿಗಳಿಗೆ ಖಿನ್ನತೆ ಉಂಟು ಮಾಡುವುದಿಲ್ಲವೇ..?

ಅಕ್ರಮಗಳ ತನಿಖೆ, ತನಿಖಾ ವರದಿಗಳು, ಮಧ್ಯವರ್ತಿಗಳ ಕೈಚಳಕ, ಕಾರ್ಯಾಚರಣೆ, ಪ್ರಶ್ನೆ ಪತ್ರಿಕೆಗಳ ಸೋರಿಕೆ, ಮಧ್ಯವರ್ತಿಗಳ ಸಂಪರ್ಕ, ಈ ರೀತಿಯಾದ ವಿಷಯಗಳು ದಿನಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಪ್ರತಿದಿನ. ಜೊತೆಗೆ ಕರ್ನಾಟಕ ಲೋಕಸೇವಾ ಆಯೋಗ ಮುಚ್ಚುವಂತೆ ಮಾತನಾಡುವ ಮುಖ್ಯಮಂತ್ರಿಗಳು, ಅಧಿಕಾರಿಗಳನ್ನ ಹದ್ದುಬಸ್ತಿನಲ್ಲಿಡದಿರುವುದು. ಮಂತ್ರಿಗಳೇ ಲಂಚವನ್ನ ಗೌರವಯುತವಾಗಿ ಕೊಡುವುದಾಗಿ ಮಾತನಾಡುತ್ತಿರುವುದು, ಇವೆಲ್ಲಾ ನಿರುದ್ಯೋಗಿಗಳ ಒಡಲ ಬೆಂಕಿಗೆ ತುಪ್ಪ ಸುರಿಯುತ್ತದೆ. ಇನ್ನು ಈ ಹಿಂದಿನ ಕೆಲವು ವರ್ಷಗಳ ನೇಮಕಾತಿಗಳಲ್ಲಿ ಏನಾಗಿರಬಹುದು?

ಈ ರೀತಿ ಸಾಲು ಸಾಲು ಅಕ್ರಮಗಳಿಗೆ ಕಡಿವಾಣ ಯಾವಾಗ! ಅರ್ಹರಿಗೆ ನ್ಯಾಯ ದೊರೆಯುವುದು ಯಾವಾಗ? ಅರ್ಹ ವಿದ್ಯಾವಂತ ಆಕಾಂಕ್ಷಿಗಳ ಉದ್ಯೋಗದ ಕನಸು ನನಸಾಗಿಸಲು ಪ್ರತಿಭೆಯೊಂದಿಗೆ, ಹಣಕಾಸು ಸದೃಢತೆ ಹಾಗೂ ಶಿಫಾರಸ್ಸು ಇರಲೇ ಬೇಕಾ...!

ಇಷ್ಟೆಲ್ಲಾ ವಿಚಾರಗಳನ್ನು ನಾನು ನಮ್ಮ ಗುರುಗಳ ಬಳಿ ಹಂಚಿಕೊಂಡಾಗ ಅವರು "ಸಮಾಜ ಯಾವುದಕ್ಕೂ ಅಸ್ಟೊಂದು ಮಹತ್ವ ಕೊಡದೆ ತಮ್ಮಷ್ಟಕ್ಕೆ ತಾವು ಬದುಕಿದರೆ ಸಾಕೆಂಬ ಮನಸ್ಥಿತಿ ಈ ದಿನಗಳಲ್ಲಿ ಕಾಣುತ್ತಿದೆ. ನ್ಯಾಯ ಪರತೆ ಬಹುತೇಕ ಕೃಷವಾಗಿದೆ. ವ್ಯಕ್ತಿ ಕೇಂದ್ರಿತ ಬದಲಾವಣೆ ಮಾತ್ರ ವ್ಯವಸ್ಥೆಯ ಬದಲಾವಣೆಗೆ ಕಾರಣ. ಕೊಳ್ಳುಬಾಕತನ ಹೋಗಬೇಕು. ಶಿಕ್ಷಣ ಮೌಲ್ಯಯುತವಾಗಿರಬೇಕು. ವೈಚಾರಿಕತೆ ಬರಬೇಕು, ಮೌಡ್ಯ ತೊಲಗಬೇಕು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಹಾಗಿದೆ ಪರಿಸ್ಥಿತಿ! ಯಾರನ್ನು ದೂರುವುದು, ಇದು ದೇಶಗಳಲ್ಲ ಜಗತ್ತಿನ ಸಂಗತಿ. ಹಂಸಕ್ಷೀರ ನ್ಯಾಯದಂತೆ ಬದುಕಬೇಕು ಅಷ್ಟೇ.." ಎಂದರು.
ಲೇಖನ: ವೇಣುಕುಮಾರ್ ಎಂ. ಭರಂಪುರ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗಳನ್ನಾಗಲಿ ಮತವನ್ನಾಗಲಿ ಅಯೋಗ್ಯರಿಗೆ ಕೊಡಬಾರದುಈರುಳ್ಳಿ ನೀರಾವರಿ ಬೆಳೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ: ನೋಂದಣಿಗೆ ನವೆಂಬರ್ 30 ಕೊನೆಯ ದಿನಗ್ರಾಮ ಪಂಚಾಯಿತಿ ಕರವಸೂಲಿಗಾರ ಹುದ್ದೆ: ನ.20ರಂದು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಪಡಿತರ ಚೀಟಿದಾರರಿಗೆ ಸಿಹಿಸುದ್ದಿ: ಇ-ಕೆವೈಸಿ ಅವಧಿ ನವೆಂಬರ್ 30ರವರೆಗೆ ವಿಸ್ತರಣೆಪ್ರಧಾನಿ ಮೋದಿ ಅಭಿವೃದ್ಧಿ ಪರ್ವ: ಕರ್ನಾಟಕಕ್ಕೆ ₹15,000 ಕೋಟಿಗೂ ಅಧಿಕ ಮೌಲ್ಯದ 14 ಪ್ರಮುಖ ಯೋಜನೆಗಳ ಕೊಡುಗೆಎಸ್‌ಸಿ-ಎಸ್‌ಟಿ ಮೀಸಲಾತಿ ರಕ್ಷಣೆಗೆ ಸುಪ್ರೀಂ ಕೋರ್ಟ್‌ಮೆಟ್ಟಿಲೇರಿದ ರಾಜ್ಯ ಸರ್ಕಾರನಿಗಮ-ಮಂಡಳಿ ನಿರ್ದೇಶಕರ ಪಟ್ಟಿ ಸಿದ್ಧ, ಅರ್ಹ ರೈತರಿಗೆ 5,000 ಬರ ಪರಿಹಾರ: ಡಿಕೆ ಶಿವಕುಮಾರ್ಕೋವಿಡ್ ಹೊಸ ರೂಪಾಂತರ 'PJ.2.1' ವಿಸ್ತರಣೆ: ಜಾಗತಿಕ ಆತಂಕ ಮತ್ತು ವೈದ್ಯರ ಎಚ್ಚರಿಕೆವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವ ಸಂಪನ್ನ: ಗರ್ಭಗುಡಿ ಬಾಗಿಲು ಬಂದ್ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಮುಂದಿನ ಬಜೆಟ್‌ನಲ್ಲಿ ತೀರ್ಮಾನ – ಡಿ. ಕೆ. ಶಿವಕುಮಾರ್