Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಡಾ ಮುಕ್ಕಿ ತಿಂದಿರುವ ಸಿದ್ದರಾಮಯ್ಯನವರ ಹೊಸ ಸದಾರಮೆ ನಾಟಕ ಶುರು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾವನ್ನು ಮುಕ್ಕಿ ತಿಂದಿರುವ ಮುಡಾರಾಮಯ್ಯ ತನ್ನ ಅಕ್ರಮಗಳು ಹೊರಬರುತ್ತಿದ್ದಂತೆ ರಾಜ್ಯದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಹೊಸ ಸದಾರಮೆ ನಾಟಕ ಶುರು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.


ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಹೌದು.. ನಿಮ್ಮ ಧರ್ಮಪತ್ನಿಯವರು ಯಾವುದೇ ತಪ್ಪು ಮಾಡಿಲ್ಲ..ಆದರೆ, ಪತ್ನಿ ಹೆಸರಲ್ಲಿ ಅಕ್ರಮವಾಗಿ ಸೈಟು ಕಬಳಿಸಿದ ಸಿದ್ಧಹಸ್ತರು..! ಮುಡಾ ಫೈಲ್ಸ್  ನ ಕಥೆ, ಚಿತ್ರ ಕಥೆ, ನಿರ್ದೇಶನ‌ನಿಮ್ಮದೇ ಅಲ್ಲವೇ..?  ಎಂದು ಜೆಡಿಎಸ್ ಪ್ರಶ್ನಿಸಿದೆ.

ಗೌರವಯುತವಾಗಿ ಮನೆಯಲ್ಲಿರುವ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಆ ತಾಯಿಯ ಹೆಸರನ್ನು  ರಾಜಕೀಯ ಲಾಭಕ್ಕೆ ಬಳಸಿಕೊಂಡ ಸೈಟ್ ಕಳ್ಳ ಸಿಕ್ಕಬಿದ್ದ ಮೇಲೆ ಈಗ ಮೊಸಳೆ ಕಣ್ಣೀರು ಸುರಿಸಲು ನಾಚೀಕೆಯಾಗುವುದಿಲ್ಲವೇ  ?

 ದಲಿತರನ್ನು ಬಳಸಿಕೊಂಡು ಬಲಿತಿರುವ ನೀವು ವಾಲ್ಮೀಕಿ ನಿಗಮದ ಹಣವನ್ನು ಹೇಗೆಲ್ಲ ಲೂಟಿ ಮಾಡಿದ್ದೀರಿ ..? ದಲಿತರ ಜಮೀನು ನುಂಗಿದ್ದೀರಿ.. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ  ಸಾವಿರಾರು ಕೋಟಿ ದುರ್ಬಳಕೆ ಮಾಡಿಕೊಂಡ ಭ್ರಷ್ಟಾತಿ ಭ್ರಷ್ಟ  ಸರ್ಕಾರ ನಿಮ್ಮದು.

ಹೆಜ್ಜೆ ಹೆಜ್ಜೆಗೂ ದಲಿತರ ಬೆನ್ನಿಗೆ ಚೂರಿ ಹಾಕುತ್ತಲೇ ಇರುವ ನಿಮಗೆ ದಲಿತರ ಬಗ್ಗೆ ಮಾತಾಡುವ ಯಾವ ನೈತಿಕತೆಯು ಉಳಿದಿಲ್ಲ ಎಂದು ಜೆಡಿಎಸ್ ಟೀಕಿಸಿದೆ.

ಎ1 ಆರೋಪಿ ಭ್ರಷ್ಟರಾಮಯ್ಯಅಲುಗಾಡುತ್ತಿರುವ  ಸಿಎಂ ಕುರ್ಚಿ ಉಳಿಸಿಕೊಳ್ಳಲು ಹಾಗೂ ಜನರ ಅನುಕಂಪ ಪಡೆಯಲು ಮಾಡುತ್ತಿರುವ ಹೈಡ್ರಾಮಾಗಳಷ್ಟೇ..! ನಿಮ್ಮ ಭಾರತೀಯ ಕಾಂಗ್ರೆಸ್ ಸೂಚನೆಗೂ ಮೊದಲೇ ತಾವೇ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ ಎಂದು ಜೆಡಿಎಸ್ ತಾಕೀತು ಮಾಡಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST