ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೆಳಗಿನ ಜಾವ ಇಡೀ ಜಿಲ್ಲೆಯ ಜನತೆ ದೀಪಾವಳಿ ಹಬ್ಬದ ಸಡಗರದಲ್ಲಿದ್ದಾಗಲೇ, ಚಿತ್ರದುರ್ಗ ಸಮೀಪದ ಜಿ.ಆರ್ ಹಳ್ಳಿ ಸಮೀಪದ ಖಾಸಗಿ ಕಾರ್ಖಾಯಲ್ಲಿ ಭೀಕರ ಅಗ್ನಿ ಅನಾಹುತವೊಂದು ಸಂಭವಿಸಿದೆ. ನಿಲ್ಲಿಸಲಾಗಿದ್ದ ಮೂರು ಬೃಹತ್ ಲಾರಿಗಳಿಗೆ ದಿಢೀರನೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಭಸ್ಮವಾಗಿವೆ.
ಘಟನೆಯ ವಿವರ: ದೀಪಾವಳಿ ಹಬ್ಬದ ಪ್ರಯುಕ್ತ ನಿಲ್ಲಿಸಲಾಗಿದ್ದ ಲಾರಿಗಳಲ್ಲಿ ಒಂದು ಲಾರಿಗೆ ಮೊದಲು ಬೆಂಕಿ ಹೊತ್ತಿಕೊಂಡಿದೆ. ಬಳಿಕ ಬೆಂಕಿಯ ಜ್ವಾಲೆ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಇನ್ನೆರಡು ಲಾರಿಗಳಿಗೂ ಆವರಿಸಿ, ಮೂರೂ ಲಾರಿಗಳು ಹೊತ್ತಿ ಉರಿದಿವೆ. ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಪರಿಶ್ರಮ ವಹಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಧ್ಯತೆ ಹಾಗೂ ತನಿಖೆ:
ಹಬ್ಬದ ಸಡಗರದಲ್ಲಿ ಯಾರೋ ಹಚ್ಚಿದ ಪಟಾಕಿಯ ಕಿಡಿ ಬಿದ್ದು ಈ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದ್ದು, ಯಾವುದೇ ಜೀವಹಾನಿ ವರದಿಯಾಗಿಲ್ಲ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.




