Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಲಜ್ಞಾನ ವಿರಚಿತ ವೀರ ಬ್ರಹ್ಮೇಂದ್ರ ಸ್ವಾಮಿಯವರ ಆರಾಧನಾ ಮಹೋತ್ಸವ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವೀರ ಬ್ರಹ್ಮೇಂದ್ರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಮದ್ವಿರಾಟ್ ಪೋತಲೂರಿ ವೀರ ಬ್ರಹ್ಮೇಂದ್ರಸ್ವಾಮಿಗಳ
14ನೇ ಆರಾಧನೆ ನಗರದ ಕನ್ನಡ ಜಾಗೃತ ಭವನದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಿಶೇಷವಾಗಿ ಅಲಂಕರಿಸಿದ್ದ ಶ್ರೀ ವೀರಬ್ರಹ್ಮಂದ್ರಸ್ವಾಮಿ ಅವರ ಭಾವಚಿತ್ರಕ್ಕೆ ವಿಶ್ವಕರ್ಮ ಸಮುದಾಯದವರಿಂದ ಪೂಜೆ ಸಲ್ಲಿಸಿ, ಪ್ರಸಾದ. ವಿನಿಯೋಗ ಮಾಡಲಾಯಿತು. ವಿವಿಧ ಕಲಾವಿದರಿಂದ ಶ್ರೀ ಶ್ರೀ ಶ್ರೀ ಮಧ್ ವಿರಾಟ ಪೊತೂಲೂರು ವೀರಬ್ರಹ್ಮಂದ್ರಸ್ವಾಮಿಗಳ ಭಕ್ತಿ  ಗಾಯನ ನಡೆಯಿತು.

ವೀರ ಬ್ರಹ್ಮೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ವೈಶಾಖ ಶುದ್ಧ ದಶಮಿ ಶ್ರೀಮದ್ ವಿರಾಟ್ ಪೋತುಲೂರು ವೀರ ಬ್ರಹ್ಮೇಂದ್ರ ಸ್ವಾಮಿ ಸಜೀವ ಸಮಾಧಿಯಾದ ದಿನ. ದೀಕ್ಷಾ ಕೈಗೊಂಡಿರುವ ಪವಿತ್ರವಾದ ದಿನ. ವೀರ ಬ್ರಹ್ಮೇಂದ್ರ ಸ್ವಾಮಿ ಅವರ ಆರಾಧನೆ ಮೂಲಕ ಅವರ ತತ್ವ ತಿಳಿಸಲು ಟ್ರಸ್ಟ್ ವತಿಯಿಂದ 14 ವರ್ಷಗಳಿಂದ ಆರಾಧನೆ ನಡೆಸಿಕೊಂಡು ಬರಲಾಗುತ್ತಿದೆ.

ವೀರ ಬ್ರಹೇಂದ್ರ ಅವರ ಕಾಲಜ್ಞಾನ ವೈಜ್ಞಾನಿಕ ಸತ್ಯ ಹೇಳುತ್ತಾ ಬಂದಿದ್ದು, ಅವರು ಹೇಳಿರುವ ಮಾತು ಬಹುಪಾಲು ನಿಜವಾಗಿವೆ. ಜ್ಞಾನದ ಕೊರತೆಯಿಂದ ಸತ್ಯಗಳಿಂದ ದೂರು ಉಳಿದಿದ್ದೇವೆ. ಪ್ರಕೃತಿ ನಾಶ ಮನುಕುಲದ ನಾಶ ಎನ್ನುವುದನ್ನು ನಾವು ಮನ ಗಾಣ.ಬೇಕಿದ್ದು ವೀರ ಬ್ರಹ್ಮೇಂದ್ರ ಅವರ ತತ್ವಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವರ ಆರಾಧನೆ ಅರ್ಥ ಪೂರ್ಣ ವಾಗಿಸಬೇಕಿದೆ ಎಂದರು.

ಇದೇ ವೇಳೆ ವಿಶ್ವಕರ್ಮ ಸಮುದಾಯದ ಹಿರಿಯರನ್ನು ಸನ್ಮಾನಿಸಲಾಯಿತು. ವೀರ ಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಭೋಜರಾಜಚಾರ್, ಅಧ್ಯಕ್ಷ ವೆಂಕಟಾಚಲಪತಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಟ್ರಸ್ಟಿಗಳಾದ ಪಿ.ಕುಮಾರ್, ಜಗದೀಶಚಾರ್, ಶಂಕರಾಚಾರ್, ಎಚ್.ಆರ್ ಮಂಜುನಾಥ್, ಎಚ್.ಎಂ.ಮನೋಹ‌ರ್, ಭಾಸ್ಕರಾಚಾರ್, ನಾರಾಯಣಚಾ‌ರ್, ರಮೇ ಶಚಾ‌ರ್, ಮೋಹ ನಾಚಾರ್, ಗಂಗಾಧರ ಚಾರ್, ವೆಂಕಟೇಶ ಮೂರ್ತಿ ಇದ್ದರು.

 ಶ್ರೀ ಶ್ರೀ ಶ್ರೀಮಧ್ ವಿರಾಟ ಪೊತೂಲೂರು ವೀರ ಬ್ರಹ್ಮೇಂದ್ರ ಸ್ವಾಮಿ 500ವರ್ಷಗಳ ಹಿಂದೆ  ಬರೆದಂತಹ ಕಾಲಜ್ಞಾನ ಇಂದಿಗೂ ಹಾಗು ಮುಂದೆಯೂ. ಪ್ರಸ್ತುತ ವಾಗಿರುತ್ತದೆ  ಅವರು ತೆಲುಗಿನಲ್ಲಿ  ಹೇಳಿದ ಮಾತು( ಈಶಾನ್ಯ ದಿಕ್ಕುಲೂ ವಿಷ ಗಾಳಿ ವಿಸೇನು  ಕೋರಂಕಿ ಜಬ್ಬು ಕೋಟಿ ಮಂದಿಕಿ ತಗಲಿ ಕೋಡಿ ತೂಗಿನಟ್ಲೇ ತೂಗಿ ಸಚ್ಚಾರಯ್ಯಾ)

ಇದರ ಅರ್ಥ ಈಶಾನ್ಯ ಭಾಗದಲ್ಲಿ ವಿಷಗಾಳಿ ಬೀಸುತ್ತೆ  ಕೊರಾನಾ ಎಂಬ ಹೆಮ್ಮಾರಿ ಕೋಟಿ ಮಂದಿಗೆ ತಗಲಿ ಕೊಕ್ಕರೆ ರೋಗ ಬಂದ ಕೋಳಿ ತೂಗಿದಂಗೆ ತೂಗಿ ಸಾಯುತ್ತಾರೆ ಎಂಬ ಮಾತು ಜಗಜ್ಜಾಹೀರಾಗಿದೆ ಎಂದು ಪರಿಸರವಾದಿ, ವೀರ ಬ್ರಹ್ಮೇಂದ್ರ ಸ್ವಾಮಿ ಭಕ್ತ ಕೆ. ಗುರುದೇವ್ ತಿಳಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST