i
ಕೇಂದ್ರ ಸರ್ಕಾರದ ವಿವಿಧ ಪಡೆಗಳಲ್ಲಿ 24,369 ಕಾನ್ಸ್ಟೆಬಲ್ ಹುದ್ದೆಗಳ ಭರ್ತಿ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೇಂದ್ರ ಸರ್ಕಾರದ ವಿವಿಧ ಪಡೆಗಳಲ್ಲಿ ಖಾಲಿ ಇರುವ ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸಿಬ್ಬಂದಿ ಆಯ್ಕೆ ಆಯೋಗ ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳನ್ನ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಕೇಂದ್ರ ಪಡೆಗಳಲ್ಲಿ 24,369 ಕಾನ್ಸ್ಟೆಬಲ್ ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಒಟ್ಟು ಹುದ್ದೆಗಳ ಪೈಕಿ ಪುರುಷರಿಗೆ 21,579 ಹಾಗೂ ಮಹಿಳೆಯರಿಗೆ 2626 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ ಪೂರ್ಣಗೊಳಿಸಿರಬೇಕು.
ಸ್ಟಾಫ್ ಸೆಲೆಕ್ಷನ್ ಕಮಿಷನ್ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್(CARP), ಸೆಕ್ರೆಟೇರಿಯಲ್ ಸೆಕ್ಯುರಿಟಿ ಫೋರ್ಸ್(CISF), ಅಸ್ಸಾಂ ರೈಫಲ್ಸ್ನಲ್ಲಿ ರೈಫಲ್ಮೆನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಲ್ಲಿ ಸಿಪಾಯಿ ಹುದ್ದೆಗಳನ್ನು ಭರ್ತಿ ಮಾಡಲು ಈ ಅಧಿಸೂಚನೆ ಹೊರಡಿಸಿದೆ.
ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳು ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಕ್ಟೋಬರ್ 27 ರಿಂದ ಹುದ್ದೆಗಳ ಭರ್ತಿ ಮಾಡಲು ಆನ್ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ.